ರಾಷ್ಟ್ರ ಸುದ್ದಿ

ಶಬರಿಮಲೆಯಲ್ಲಿ ದೀಪ ಹೋರಾಟ: ಬರೋಬ್ಬರಿ 795 ಕಿಮೀ ಉದ್ದದ ಅಯ್ಯಪ್ಪ ಜ್ಯೋತಿ ಉರಿಸಿದ ಭಕ್ತರು

ತಿರುವನಂತಪುರ: ಹಲವಾರು ವರ್ಷಗಳ ಕಾಲದಿಂದಲೂ ಶಬರಿಮಲೆ ಅಯ್ಯಪ್ಪ ಸನ್ನಿಧಾನದಲ್ಲಿ ನಡೆದುಕೊಂಡು ಬಂದಿರುವ ಸಂಪ್ರದಾಯವನ್ನು ಉಳಿಸಿಕೊಂಡು ಹೋಗಬೇಕೆಂಬ ಆಶಯದೊಂದಿಗೆ ಕೇರಳ ರಾಜ್ಯದಲ್ಲಿ ಬುಧವಾರ ಬೃಹತ್ ಅಯ್ಯಪ್ಪ ಜ್ಯೋತಿ ಹೋರಾಟವನ್ನು ನಡೆಸಲಾಯಿತು.
ಕಾಸರಗೋಡಿನ ಹೊಸಂಗಡಿಯಿಂದ ಹಿಡಿದು ಕನ್ಯಾಕುಮಾರಿಯವರೆಗೆ 795 ಕಿಮೀ ಉದ್ದದ ಜಾಗದಲ್ಲಿ ಲಕ್ಷಾಂತರ ಜನರು ಸಂಜೆ 6ರಿಂದ 6.30ರವರೆಗೆ ಜ್ಯೋತಿ ಬೆಳಗುವ ಮೂಲಕ ಅಯ್ಯಪ್ಪನ ಮಂತ್ರವನ್ನು ಜಪಿಸಿದರು. ಶಬರಿಮೆ ಕರ್ಮ ಸಮಿತಿ ಬಿಜೆಪಿ ಈ ಕಾರ್ಯಕ್ರಮವನ್ನು ಆಯೋಜಿಸಿದ್ದು, ಲಕ್ಷಾಂತರ ಭಕ್ತರು ಈ ಹೋರಾಟದಲ್ಲಿ ಭಾಗಿಯಾಗಿದ್ದರು.
2019 ಜ.1ರಂದು ಕೇರಳ ಸರ್ಕಾರ ರಾಜ್ಯದುದ್ದಕ್ಕೂ ಮಹಿಳಾ ಗೋಡೆ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಶಬರಿಮಲೆ ವಿವಾದದಿಂದ ತನ್ನ ವರ್ಚಸ್ಸಿಗೆ ಉಂಟಾದ ಧಕ್ಕೆಯನ್ನು ಸರಿಪಡಿಸಲು ಎಂಬಂತೆ ಕಾರ್ಯಕ್ರಮವನ್ನು ಆಯೋಜಿಸಿದೆ. ಇದಕ್ಕೆ ಪ್ರತಿಯಾಗಿ ಹಿಂದೂ ಸಂಘಟನೆಗಳು ಅಯ್ಯಪ್ಪ ಜ್ಯೋತಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದವು.

About the author

ಕನ್ನಡ ಟುಡೆ

Leave a Comment