ರಾಷ್ಟ್ರ ಸುದ್ದಿ

ಶಬರಿಮಲೆ ತೀರ್ಪು: ಮರುಪರಿಶೀಲನಾ ಅರ್ಜಿ ಸಲ್ಲಿಸಲಿರುವ ದೇವಸ್ವಂ ಮಂಡಳಿ

ತಿರುವನಂತಪುರಂ: ಶಬರಿಮಲೆ ದೇವಾಲಯಕ್ಕೆ ಮಹಿಳೆಯರ ಪ್ರವೇಶಕ್ಕೆ ಅನುಮತಿ ನೀಡಿರುವ ಸುಪ್ರೀಂಕೋರ್ಟ್ ಐತಿಹಾಸಿಕ ತೀರ್ಪಿನ ಬಗ್ಗೆ ತಿರುವಾಂಕೂರು ದೇವಸ್ವಂ ಮಂಡಳಿ (ಟಿಡಿಬಿ) ಅಧ್ಯಕ್ಷ ಎ ಪದ್ಮಕುಮಾರ್ ಪ್ರತಿಕ್ರಿಯೆ ನೀಡಿದ್ದು, ಮರುಪರಿಶೀಲನಾ ಅರ್ಜಿ ಸಲ್ಲಿಸುವುದಾಗಿ ಹೇಳಿದ್ದಾರೆ.
ಧಾರ್ಮಿಕ ಮುಖಂಡರ ಬೆಂಬಲ ಪಡೆದು, ದೇವಸ್ವಂ ಮಂಡಳಿ ಮರುಪರಿಶೀಲನಾ ಅರ್ಜಿ ಸಲ್ಲಿಸಲಿದೆ, ಇದಕ್ಕೂ ಮುನ್ನ ಸುಪ್ರೀಂ ಕೋರ್ಟ್ ತೀರ್ಪಿನ ಪೂರ್ಣಪಾಠವನ್ನು ಸ್ಪಷ್ಟವಾಗಿ ತಿಳಿದುಕೊಳ್ಳುತ್ತೇವೆ, ನಂತರ ಏನು ಮಾಡಬೇಕೆಂಬುದನ್ನು ನಿರ್ಧರಿಸುತ್ತೇವೆ  ಎಂದು ಎ ಪದ್ಮಕುಮಾರ್ ಹೇಳಿದ್ದಾರೆ.  ” ನಾವು ಈಗ ಇರುವ ಧಾರ್ಮಿಕ ಪದ್ಧತಿಗಳನ್ನೇ ಮುಂದುವರೆಸಬೇಕೆಂದಿದ್ದೇವೆ” ಎಂಬುದನ್ನು ದೇವಸ್ವಂ ಮಂಡಳಿ ಸುಪ್ರೀಂ ಕೋರ್ಟ್ ಗೆ ತಿಳಿಸಿತ್ತು. ಎಂದು ಪದ್ಮಕುಮಾರ್ ಹೇಳಿದ್ದಾರೆ.  ಆದರೆ ಈಗ ಬೇರೆ ಯಾವುದೇ ಮಾರ್ಗವಿಲ್ಲದೇ ತೀರ್ಪನ್ನು ದೇವಸ್ವಂ ಮಂಡಳಿ ಜಾರಿಗೆ ತರಬೇಕಿದೆ.”ಕೋರ್ಟ್ ತೀರ್ಪು ಬೇಸರ ಮೂಡಿಸಿದೆ. ಆದರೆ ನಾವು ಅದನ್ನು ಒಪ್ಪುತ್ತೇವೆ, ಸಧ್ಯಕ್ಕೆ ಸುಪ್ರೀಂ ಕೋರ್ಟ್ ನಿರ್ದೇಶನವನ್ನು ಜಾರಿಗೊಳಿಸುವುದಕ್ಕೆ ಅಗತ್ಯವಿರುವ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ, ಸುಪ್ರೀಂ ಕೋರ್ಟ್ ತೀರ್ಪನ್ನು ಪೂರ್ತಿ ಗ್ರಹಿಸಲಾಗುತ್ತದೆ ಎಂದು ಶಬರಿಮಲೆ ಮುಖ್ಯ ಅರ್ಚಕ ಕಂದಾರರು ರಾಜೀವರು ಹೇಳಿದ್ದಾರೆ.

About the author

ಕನ್ನಡ ಟುಡೆ

Leave a Comment