ರಾಜ್ಯ ಸುದ್ದಿ

ಶಬರಿಮಲೆ ದೇವಾಲಯಕ್ಕೆ ಮಹಿಳೆಯರ ಪ್ರವೇಶ: ಸುಪ್ರೀಂ ತೀರ್ಪು ಸಂತಸ ತಂದಿದೆ, ಜಯಮಾಲ

ಮಹಿಳೆಯರ ಪ್ರವೇಶಕ್ಕೆ ಅನುಮತಿ ನೀಡುವ ಮೂಲಕ 800 ವರ್ಷಗಳ ಹಿಂದಿನ ಪದ್ಧತಿಗೆ ತೆರೆ ಎಳೆದಿರುವ ಸುಪ್ರೀಂ ಕೋರ್ಟ್ ತೀರ್ಪಿನ ಬಗ್ಗೆ ಸಚಿವೆ ಜಯಮಾಲ ಪ್ರತಿಕ್ರಿಯೆ ನೀಡಿದ್ದಾರೆ. ಸುಪ್ರೀಂ ತೀರ್ಪಿನ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿರುವ ಜಯಮಾಲ, ” ನನಗೆ ನಮ್ಮ ಸಂವಿಧಾನ, ನ್ಯಾಯಾಂಗದ ಬಗ್ಗೆ ನಂಬಿಕೆ ಇದೆ, ಸುಪ್ರೀಂ ಕೋರ್ಟ್ ತೀರ್ಪಿನಿಂದ ಸಂತಸವಾಗಿದೆ ಎಂದು ಹೇಳಿದ್ದಾರೆ. ಈ ಹಿಂದೆ ನಟಿ ಜಯಮಾಲ ಅವರು ಅಯ್ಯಪ್ಪಸ್ವಾಮಿ ಗರ್ಭಗುಡಿ ಪ್ರವೇಶಿಸಿ ಪಾದ ಸ್ಪರ್ಶ ಮಾಡಿದ್ದೆ ಎಂದು ಹೇಳಿ ದೇಗುಲ ಸಮಿತಿ ಹಾಗೂ ಕೇರಳದ ಭಕ್ತರ ಕೋಪಕ್ಕೆ ತುತ್ತಾಗಿದ್ದರು. ದೇವಸ್ಥಾನದ ಜ್ಯೋತಿಷಿ ಉನ್ನಿಕೃಷ್ಣನ್ ಪಣಿಕ್ಕರ್, ಅವರ ಸಹಾಯಕ ರಘುಪತಿ ಮತ್ತು ದೇವಸ್ಥಾನದ ಕಾರ್ಯಕಾರಿ ಅಧಿಕಾರಿ ರಾಜಶೇಖರ್ ಇನ್ನಿತರರು ಕೂಡಾ ಆರೋಪಿಗಳಾಗಿ ಕೋರ್ಟ್ ಮೆಟ್ಟಿಲೇರಿದಿದ್ದರು. ಆದರೆ, ಕೊನೆಗೆ  ಜಯಮಾಲಾ ಅವರನ್ನು ನಿರ್ದೋಷಿ ಎಂದು ಕೋರ್ಟ್ ಘೋಷಿಸಿತ್ತು.

About the author

ಕನ್ನಡ ಟುಡೆ

Leave a Comment