ರಾಷ್ಟ್ರ

ಶಶಿಕಲಾ ಪತಿ ನಟರಾಜನ್ ನಿಧನ

ಚೆನ್ನೈ: ಉಚ್ಛಾಟಿತ ಎಐಎಡಿಎಂಕೆ ನಾಯಕಿ ವಿ.ಕೆ.ಶಶಿಕಲಾ ಅವರ ಪತಿ ನಟರಾಜನ್ ಮಾರುಥಪ್ಪ (74) ಸೋಮವಾರ ತಡರಾತ್ರಿ ನಿಧನರಾಗಿದ್ದಾರೆಂದು ತಿಳಿದುಬಂದಿದೆ. ಅಂಗಾಂಗ ವೈಫಲ್ಯ ಹಾಗೂ ಶ್ವಾಸಕೋಷ ಸೋಂಕಿನಿಂದ ಬಳಲುತ್ತಿದ್ದ ನಟರಾಜನ್ ಅವರು ತಡರಾತ್ರಿ 1.35ರ ಸುಮಾರಿಗೆ ಗ್ಲೆನೇಗಲ್ಸ್ ಗ್ಲೋಬಲ್ ಹೆಲ್ತ್ ಸಿಟಿ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದಾರೆಂದು  ತಿಳಿದುಬಂದಿದೆ.

ನಟರಾಜನ್ ಅವರ ಮೃತದೇಹವನ್ನು ಶ್ರೀರಾಮಚಂತ್ರ ವೈದ್ಯಕೀಯ ಆಸ್ಪತ್ರೆಯಲ್ಲಿ ಇರಿಸಲಾಗಿದೆ. ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಮೃತ ನಟರಾಜನ್ ಪತ್ನಿ ವಿಕೆ ಶಶಿಕಲಾ ಅವರು ಬೆಂಗಳೂರು ನಗರದ ಪರಪ್ಪನ ಅಗ್ರಹಾರ ಕೇಂದ್ರೀಯ ಕಾರಾಗೃಹದಲ್ಲಿದ್ದು ಪತಿಯ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಪೆರೋಲ್ ಪಡೆಯುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.

 

About the author

ಕನ್ನಡ ಟುಡೆ

Leave a Comment