ರಾಷ್ಟ್ರ ಸುದ್ದಿ

ಶಸ್ತ್ರಾಸ್ತ್ರಗಳೊಂದಿಗೆ ನಾಪತ್ತೆಯಾಗಿದ್ದ ಎಸ್ ಪಿಒ ಅಧಿಕಾರಿ ಹಿಜ್ಬುಲ್ ಉಗ್ರ ಸಂಘಟನೆ ಸೇರ್ಪಡೆ

ಶ್ರೀನಗರ: ಕಳೆದ ವಾರ ಶ್ರೀನಗರದ ಎಸ್ ಪಿಒ ಕಚೇರಿಯಿಂದಲೇ 8 ಎಕೆ 47 ಗನ್ ಗಳೊಂದಿಗೆ ನಾಪತ್ತೆಯಾಗಿದ್ದ ವಿಶೇಷ ಭದ್ರತಾ ಅಧಿಕಾರಿ ಕುಖ್ಯಾತ ಉಗ್ರ ಸಂಘಟನೆ ಹಿಜ್ಬುಲ್ ಮುಜಾಹಿದ್ದೀನ್ ಗೆ ಸೇರ್ಪಡೆಯಾಗಿದ್ದಾನೆ ಎಂದು ತಿಳಿದುಬಂದಿದೆ.
ಈ ಬಗ್ಗೆ ಸ್ವತಃ ಜಮ್ಮು ಮತ್ತು ಕಾಶ್ಮೀರ ಪೊಲೀಸ್ ವರಿಷ್ಠಾಧಿಕಾರಿಗಳು ಸ್ಪಷ್ಟನೆ ನೀಡಿದ್ದು, ಕಳೆದವಾರ ಎಕೆ 47 ಗನ್ ಗಳೊಂದಿಗೆ ನಾಪತ್ತೆಯಾಗಿದ್ದ ಎಸ್ ಪಿಒ ಅಧಿಕಾರಿ ಅದಿಲ್ ಬಷೀರ್ ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆ ಸೇರಿದ್ದಾರೆ. ಅವರು ಹಿಜ್ಬುಲ್ ಉಗ್ರ ಸಂಘಟನೆ ಕಮಾಂಡರ್ ಜೀನತ್ ಉಲ್ ಇಸ್ಲಾಂ ಜೊತೆಗಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ ಎಂದು ಹೇಳಿದ್ದಾರೆ. ಅಂತೆಯೇ ಶ್ರೀನಗರ ಎಸ್ ಪಿಒ ಕಚೇರಿಯಿಂದ ಬಷೀರ್ ಗನ್ ಗಳನ್ನು ಕದಿಯಲು ಓರ್ವ ಸ್ಥಳೀಯ ನೆರವು ನೀಡಿದ್ದು, ನೆರವು ನೀಡಿದ ವ್ಯಕ್ತಿಯನ್ನು ಗುರಿತಿಸಲಾಗಿದೆ. ಶೋಪಿಯಾನ್ ಜಿಲ್ಲೆಯ ಆ ನಿವಾಸಿಯ ವಿರುದ್ಧ ಈಗ ಪ್ರಕರಣ ದಾಖಲಾಸಲಾಗಿದೆ. ಶೀಘ್ರ ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತೇವೆ ಎಂದು ಹೇಳಿದ್ದಾರೆ.
ಕಳೆದ ಸೆಪ್ಟೆಂಬಕ್ 28ರಂದು ಶೋಪಿಯಾನ್ ನ ಜವಾಹರ್ ನಗರದಲ್ಲಿರುವ ಶಾಸಕ ಎಜಾಜ್ ಮೀರ್ ಅವರ ನಿವಾಸಕ್ಕೆ ಭದ್ರತೆಗೆ ನಿಯೋಜನೆಗೊಂಡಿದ್ದ ಎಸ್ ಪಿಒ ಅಧಿಕಾರಿ ಅದಿಲ್ ಬಷೀರ್ 8 ಎಕೆ 47 ಗನ್ ಗಳೊಂದಿಗೆ ಪರಾರಿಯಾಗಿದ್ದರು. ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಕಾಶ್ಮೀರ ಪೊಲೀಸರು ಮೀರ್ ನಿವಾಸದ 10ಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿಗಳನ್ನು ವಿಚಾರಣೆ ನಡೆಸಿದ್ದರು.

About the author

ಕನ್ನಡ ಟುಡೆ

Leave a Comment