ರಾಷ್ಟ್ರ ಸುದ್ದಿ

ಶಸ್ತ್ರಾಸ್ತ್ರ, ಶೂ ಧರಿಸಿ ಯಾವುದೇ ಪೊಲೀಸರು ಪೂರಿ ಜಗನ್ನಾಥ ದೇಗುಲ ಪ್ರವೇಶಿಸುವಂತಿಲ್ಲ: ಸುಪ್ರೀಂಕೋರ್ಟ್

ನವದೆಹಲಿ: ಶಸ್ತ್ರಾಸ್ತ್ರ ಹಾಗೂ ಶೂ ಧರಿಸಿ ಯಾವುದೇ ಪೊಲೀಸರು ಕೂಡ ಜಗತ್ಪ್ರಸಿದ್ಧ ಪೂರಿ ಜಗನ್ನಾಥ ದೇಗುಲ ಪ್ರವೇಶ ಮಾಡುವಂತಿಲ್ಲ ಎಂದು ಸುಪ್ರೀಂಕೋರ್ಟ್ ಬುಧವಾರ ಹೇಳಿದೆ. ಜಗನ್ನಾಥ ದೇಗುಲದಲ್ಲಿ ಹೊಸ ಕ್ಯೂ ವ್ಯವಸ್ಥೆಯಿಂದ ಬೇಸಕ್ತ ಭಕ್ತಾದಿಗಳು ಅ.3 ರಂದು ಬಂದ್’ಗೆ ಕರೆ ನೀಡಿದ್ದರು. ಈ ಬಂದ್ ಹಿಂಸಾರೂಪಕ್ಕೆ ತಿರುಗಿತ್ತು. ಪ್ರತಿಭಟನೆಗಿಳಿದಿದ್ದ ಭಕ್ತರು ಏಕಾಏಕಿ ದೇವಸ್ಥಾನದ ಆಡಳಿತ ಮಂಡಳಿಯ ಕಚೇರಿ ಮೇಲೆ ದಾಳಿ ನಡೆಸಿದ್ದರು.
ಘಟನೆಗೆ ಸಂಬಂಧಿಸಿದಂತೆ ಸಂಘಟನೆಯೊಂದು ನ್ಯಾಯಾಲಯದ ಮೆಟ್ಟಿಲೇರಿತ್ತು. ಪೂರಿ ಜಗನ್ನಾಥ ದೇಗುಲದೊಳಗೆ ಪೊಲೀಸರು ಶಸ್ತ್ರಾಸ್ತ್ರ ಹಾಗೂ ಶೂಗಳನ್ನು ಧರಿಸಿ ಪ್ರವೇಶ ಮಾಡುತ್ತಿದ್ದಾರೆ. ಪ್ರಕರಣ ಸಂಬಂಧ ಮಧ್ಯ ಪ್ರವೇಶಿಸುವಂತೆ ಮನವಿ ಮಾಡಿಕೊಂಡಿದ್ದು, ಪ್ರಕರಣ ಸಂಬಂಧ ಇಂದು ವಿಚಾರಣೆ ನಡೆಸಿರುವ ನ್ಯಾಯಮೂರ್ತಿಗಳಾದ ಮದನ್ ಬಿ ಲೋಕುರ್ ಹಾಗೂ ದೀಪಕ್ ಗುಪ್ತಾ ಅವರು, ಯಾವುದೇ ಪೊಲೀಸರೇ ಆಗಲಿ ಶಸ್ತ್ರಾಸ್ತ್ರ ಹಾಗೂ ಶೂ ಧರಿಸಿ ದೇಗುಲ ಪ್ರವೇಶಿಸುವಂತಿಲ್ಲ ಎಂದು ಹೇಳಿದೆ. ವಿಚಾರಣೆ ವೇಳೆ ನ್ಯಾಯಾಲಕ್ಕೆ ಮಾಹಿತಿ ನೀಡಿರುವ ಒಡಿಶಾ ಸರ್ಕಾರ ಪ್ರಕರಣ ಸಂಬಂಧ ಈ ವರೆಗೂ 47 ಮಂದಿಯನ್ನು ಬಂಧನಕ್ಕೊಳಪಡಿಸಲಾಗಿದ್ದು, ಪ್ರಸ್ತುತ ವಾತಾವರಣ ನಿಯಂತ್ರಣದಲ್ಲಿದೆ. ದೇಗುಲದ ಆವರಣದಲ್ಲಿ ಯಾವುದೇ ರೀತಿಯ ಹಿಂಸಾಚಾರಗಳು ನಡೆಯುತ್ತಿಲ್ಲ. ದೇಗುಲದ ಕಚೇರಿಯನ್ನು ದೇಗುಲದಿಂದ 500 ಮೀಟರ್ ಗಳಷ್ಟು ದೂರ ಇರಿಸಲಾಗಿದೆ ಎಂದು ತಿಳಿಸಿದೆ.

About the author

ಕನ್ನಡ ಟುಡೆ

Leave a Comment