ರಾಜ್ಯ ಸುದ್ದಿ

ಶಸ್ತ್ರ ಚಿಕಿತ್ಸೆ ಬಳಿಕ ಸಿದ್ಧಗಂಗಾ ಸ್ವಾಮೀಜಿ ಮಠಕ್ಕೆ ವಾಪಸ್‌

ತುಮಕೂರು: ಯಶಸ್ವಿ ಶಸ್ತ್ರಚಿಕಿತ್ಸೆ ಬಳಿಕ ಶತಾಯುಷಿ, ಭಕ್ತರ ಪಾಲಿನ ನಡೆದಾಡುವ ದೇವರು ಸಿದ್ಧಗಂಗಾ ಡಾ. ಶಿವಕುಮಾರ ಸ್ವಾಮೀಜಿ ಅವರು ಕ್ಷೇಮವಾಗಿ ಮಠಕ್ಕೆ ವಾಪಸ್ಸಾಗಿದ್ದಾರೆ. 13 ದಿನಗಳಿಂದ ಚೆನ್ನೈನ ರೇಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಬುಧವಾರ ಮಧ್ಯಾಹ್ನ ಸಿದ್ಧಗಂಗಾ ಮಠಕ್ಕೆ ಆಗಮಿಸುತ್ತಿದ್ದಂತೆ ಸಾವಿರಾರು ಭಕ್ತರು ಹರ್ಷದಿಂದ ಜಯಕಾರ ಮೊಳಗಿಸಿದರು.

ಸಿದ್ಧಗಂಗಾ ಶ್ರೀಗಳ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದ್ದು, ಲವಲವಿಕೆಯಿಂದ ಇದ್ದರು. ಇನ್ನೂ ಕೆಲ ದಿನಗಳ ಕಾಲ ಶ್ರೀಗಳಿಗೆ ವಿಶ್ರಾಂತಿ ಅಗತ್ಯವಿದ್ದು, ಹಳೇ ಮಠದಲ್ಲೇ ಶ್ರೀಗಳ ವಿಶ್ರಾಂತಿಗೆ ಸಿದ್ಧತೆ ಮಾಡಲಾಗಿದೆ. ಡಿಸ್ಚಾರ್ಜ್‌ ಆದ ಬಳಿಕ ವಿಶೇಷ ವಿಮಾನದ ಮೂಲಕ ಶ್ರೀಗಳು ಬೆಂಗಳೂರಿನ ಎಚ್‌ಎಎಲ್‌ಗೆ ಬಂದಿಳಿದರು. ಅಲ್ಲಿಂದ ಆ್ಯಂಬುಲೆನ್ಸ್ನಲ್ಲಿ ಶ್ರೀಮಠಕ್ಕೆ ಆಗಮಿಸಿದರು. ನಾಲ್ಕು ಗಂಟೆಗಳ ಪ್ರಯಾಣ ಬೆಳೆಸಿ ಆಗಮಿಸಿದ ಬಳಿಕ ಶ್ರೀಗಳು ಯಾವುದೇ ಆಯಾಸ ಇಲ್ಲದೆ, ಮಧ್ಯಾಹ್ನ ಇಷ್ಟಲಿಂಗ ಪೂಜೆ ನೆರವೇರಿಸಿ ಪ್ರಸಾದ ಸೇವಿಸಿದರು

 

About the author

ಕನ್ನಡ ಟುಡೆ

Leave a Comment