ರಾಷ್ಟ್ರ

ಶಾಲೆಯ ಶೌಚಾಲಯದಲ್ಲೇ ತಯಾರಾಗ್ತಿದೆ ಮಧ್ಯಾಹ್ನದ ಬಿಸಿಯೂಟ

ಮಧ್ಯಪ್ರದೇಶ:  ದಮೋಹ್ ನಲ್ಲಿ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ.ಇಲ್ಲಿನ ಶಾಲೆಯಲ್ಲಿ ಮಧ್ಯಾಹ್ನದ ಬಿಸಿಯೂಟ ತಯಾರಿಸಲು ಇರುವ ಪಾತ್ರೆಗಳನ್ನೆಲ್ಲ ಶೌಚಾಲಯದಲ್ಲಿ ಇಡಲಾಗುತ್ತಿದೆ.ಅಕ್ಕಿ,ಬೇಳೆ,ತರಕಾರಿಗಳನ್ನು ಕೂಡ ಟಾಯ್ಲೆಟ್ ನಲ್ಲೇ ಇಡಲಾಗುತ್ತದೆ.ಶೌಚಾಲಯದ ಹೊರಭಾಗದಲ್ಲೇ ಮಕ್ಕಳಿಗಾಗಿ ಮಧ್ಯಾಹ್ನದ ಬಿಸಿಯೂಟ ತಯಾರಿಸಲಾಗುತ್ತಿದೆ.ಶಾಲೆಯಲ್ಲಿ ಅಡುಗೆ ಮಾಡಲು ಪ್ರತ್ಯೇಕ ಸ್ಥಳವಿಲ್ಲ ಹಾಗಾಗಿ ಸಿಬ್ಬಂದಿ ಶಾಚಾಲವನ್ನೇ ಅಡುಗೆ ಮನೆ ಮಾಡಿಕೊಂಡಿದ್ದಾರೆ. ಈ ಸರ್ಕಾರಿ ಶಾಲೆಯ ಮುಖ್ಯಶಿಕ್ಷಕರು ಮಾತ್ರ ತಪ್ಪೆಲ್ಲ ಅಡುಗೆ ಮಾಡೋ ಸಿಬ್ಬಂದಿಯದ್ದು ತನಗೆ ಈ ವಿಚಾರ ಗೊತ್ತೇಲ್ಲ ಎನ್ನುತ್ತಿದ್ದಾರೆ.ಈ ಘಟನೆ ಬಗ್ಗೆ ತನಿಖೆಗೆ ಆದೇಶಿಸಿದ್ದು,ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಸಚಿವ ಗೋಪಾಲ್ ಭಾರ್ಗವ್ ತಿಳಿಸಿದ್ದಾರೆ.

About the author

ಕನ್ನಡ ಟುಡೆ

Leave a Comment