ಸುದ್ದಿ

ಶಾಸಕ ವಜ್ಜಲ್ ರವರ ಪುತ್ರನ ಮದುವೆಯಲ್ಲಿ 500 ಸಾಮೂಹಿಕ ಮದುವೆ

ಲಿಂಗಸುಗುರ: ನವೆಂಬರ್ 26 ರಂದು ತಮ್ಮ ದ್ವಿತೀಯ ಪುತ್ರ ಶ್ರೀ ಮಂತರಾಯ ಹಾಗೂ ಅಳಿಯ ಅಮೃತ ಮದುವೆ ಪ್ರಯುಕ್ತ ಪಟ್ಟಣದಲ್ಲಿ ಸರ್ವಧರ್ಮಗಳ 500 ಜೋಡಿಗಳ ವಿವಾಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಲಿಂಗಸುಗುರ ಶಾಸಕರಾದ ಮಾನಪ್ಪ ಡಿ.ವಜ್ಜಲ್ ತಿಳಿಸಿದರು.

ನಗರದಲ್ಲಿ ಸೋಮವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ತಮ್ಮ ಪುತ್ರ ಮತ್ತು ಅಳಿಯನ ವಿವಾಹದ ಜೊತೆಗೆ ಸರ್ವಧರ್ಮಗಳ 500 ಜೋಡಿಗಳ ಸಾಮೂಹಿಕ ವಿವಾಹ ನಡೆಸುವಂತೆ ಎಂಎನ್ ಕೆವಿ ಸಂಘದ ಪದಾಧಿಕಾರಿಗಳು ತಿರ್ಮಾನಿಸಿದ್ದಾರೆ. ಆಯಾ ಧರ್ಮದ ಸಂಪ್ರದಾಯದ ಪ್ರಕಾರವೇ ವಿವಾಹ ನಡೆಸಲಾಗುವುದು. ಸಾಮೂಹಿಕ ವಿವಾಹದಲ್ಲಿ ಮದುವೆಯಾಗುವ ಗಂಡು ಅಥವಾ ಹೆಣ್ಣಾಗಲಿ ಲಿಂಗಸುಗುರು ಕ್ಷೇತ್ರದವರಾಗಿರಬೇಕು.ಕ್ಷೇತ್ರದವರಿಗೆ ಮೊದಲ ಆದ್ಯತೆ ನೀಡಲಾಗುವುದು ಎಂದು ತಿಳಿಸಿದರು.

ಸಾಮೂಹಿಕ ವಿವಾಹದಲ್ಲಿ ನೊಂದಣಿ ಮಾಡಿಸಿಕೊಳ್ಳಲು ಇಚ್ಛಿಸುವವರು ನ. 5 ರೊಳಗೆ ವಯಸ್ಸಿನ ಪ್ರಮಾಣ ಪತ್ರ, ಧೃಢೀಕೃತ ಅಗತ್ಯ ದಾಖಲೆಗಳೊಂದಿಗೆ ಎಂಎನ್ ಕೆವಿ ಸಂಘದ ಅದ್ಯಕ್ಷರಾದ ಗೋವಿಂದ ನಾಯಕ(9901496096), ಪದಾಧಿಕಾರಿಗಳಾದ ಮುದುಕಪ್ಪ ನಾಯಕ (9035837465), ಹುಲ್ಲೇಶ ಕಾಚಾಪುರ (9008395591), ವೆಂಕನಗೌಡ ಐದನಾಳ(98868849205), ಅಮರೇಶ ಹಿರೆಹೆಸರೂರ (9901959249) ಇವರನ್ನು ಸಂಪರ್ಕಿಸಲು ಸೂಚಿಸಿದರು.

About the author

ಕನ್ನಡ ಟುಡೆ

Leave a Comment