ರಾಷ್ಟ್ರ

ಶಾ ಮುಂಬೈ ಕರ್ನಾಟಕ ಪ್ರವಾಸ ಮುಂದೂಡಿಕೆ

ನವದೆಹಲಿ: ಬಿಜೆಪಿ ಅಧ್ಯಕ್ಷ ಅಮಿತ್ ಶಾ ಬೆಳಗಾವಿ, ಬಾಗಲಕೋಟೆ, ಹಾವೇರಿಯಲ್ಲಿ ನಡೆಸಬೇಕಿದ್ದ ಎರಡು ದಿನಗಳ ಪ್ರವಾಸವನ್ನು ಮುಂದೂಡಲಾಗಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.

ಸಂಸತ್ತಿನಲ್ಲಿ ಇಂದು ವಿಪಕ್ಷಗಳು ಸಿಜೆಐ ದೀಪಕ್ ಮಿಶ್ರಾ ವಿರುದ್ಧ ಮಹಾಭಿಯೋಗ ಪ್ರಸ್ತಾಪ ಮಂಡಿಸುವ ಹಿನ್ನೆಲೆಯಲ್ಲಿ ಸಂಸತ್ ಕಲಾಪದಲ್ಲಿ ಭಾಗವಹಿಸಲು ಮುಂಬೈ ಕರ್ನಾಟಕದಲ್ಲಿ ನಡೆಸಬೇಕಿದ್ದ ಎರಡು ದಿನಗಳ ಪ್ರವಾಸವನ್ನು ಮುಂದೂಡಲಾಗಿದೆ ಎಂದು ಹೇಳಲಾಗಿದೆ.

ಏಪ್ರಿಲ್ 12 ,13  ಮುಂದಿನ ಪ್ರವಾಸವನ್ನು ಕೈಗೊಳ್ಳುವ ನಿರೀಕ್ಷೆ ಇದೆ ಎಂದು ಹೇಳಲಾಗಿದೆ.

 

About the author

ಕನ್ನಡ ಟುಡೆ

Leave a Comment