ರಾಜ್ಯ ಸುದ್ದಿ

ಶಿಕ್ಷಕ ವರ್ಗಾವಣೆ ಹತಾಶ: 2 ವರ್ಷದಿಂದ ಆಗದ ವರ್ಗಾವಣೆ

ಬೆಂಗಳೂರು: ಸತತ ಎರಡು ವರ್ಷಗಳಿಂದ ಪದೇಪದೇ ಮುಂದೂಡಿಕೆಯಾಗುತ್ತಿದ್ದ ಸರಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ವರ್ಗಾವಣೆಯನ್ನು ಈ ವರ್ಷವೂ ಕೈಬಿಟ್ಟು ಮುಂದಿನ ವರ್ಷ ಮಾರ್ಚ್‌ನಲ್ಲಿ ನಡೆಸಲು ರಾಜ್ಯ ಸರಕಾರ ಅಧಿಕೃತವಾಗಿ ತೀರ್ಮಾನಿಸಿದೆ. ಈ ಪ್ರಕ್ರಿಯೆಗೆ ಆಕ್ರೋಶ ವ್ಯಕ್ತಪಡಿಸಿರುವ ಶಿಕ್ಷಕರ ಸಮೂಹ, ಬೀದಿಗಿಳಿದು ತೀವ್ರ ಹೋರಾಟ ನಡೆಸಲು ನಿರ್ಧರಿಸಿದೆ. ನ.5ರಿಂದ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಅನಿರ್ದಿಷ್ಟಾವಧಿ ಮುಷ್ಕರ  ನಡೆಸಲು ಸಿದ್ಧತೆ ನಡೆಸಲಾಗುತ್ತಿದೆ.

ಶಿಕ್ಷಕ ವರ್ಗಾವ ಣೆಕಾಯಿದೆಗೆ ತಿದ್ದುಪಡಿ ಹಾಗೂ ವಿಧಾನಸಭೆ ಚುನಾವಣೆ ನೆಪ ಮಾಡಿಕೊಂಡು 2017-18ನೇ ಸಾಲಿನಲ್ಲಿಯೂ ಶಿಕ್ಷಕರ ವರ್ಗಾವಣೆ ನಡೆಸಲಿಲ್ಲ. ಈ ವರ್ಷವೂ ಜೂನ್‌ನಿಂದಲೂ ನಾನಾ ನೆಪ ಮಾಡಿಕೊಂಡು ಆರು ಬಾರಿ ವರ್ಗಾವಣೆ ಕೌನ್ಸೆಲಿಂಗ್‌ ಮುಂದೂಡುತ್ತ ಬರಲಾಗಿತ್ತು. ಈಗ ಶಿಕ್ಷಣ ಖಾತೆ ತಮ್ಮ ಬಳಿಯೇ ಇಟ್ಟುಕೊಂಡಿರುವ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರೇ 2019ರ ಮಾರ್ಚ್‌ವರೆಗೂ ಶಿಕ್ಷಕರ ವರ್ಗಾವಣೆ ನಡೆಸುವುದಿಲ್ಲ ಎಂದು ಹೇಳಿದ್ದಾರೆ. ವರ್ಗಾವಣೆ ಸಂಬಂಧ ಇಲಾಖೆ ಕಳೆದ ಹತ್ತು ತಿಂಗಳಿಂದ ನಡೆಸಿದ ಕಸರತ್ತು ಸಂಪೂರ್ಣ ವ್ಯರ್ಥವಾಗಿದೆ.

About the author

ಕನ್ನಡ ಟುಡೆ

Leave a Comment