ಸಿನಿ ಸಮಾಚಾರ

ಶಿವಣ್ಣ ಜೊತೆ ಸಿನಿಮಾ ಮಾಡುವ ಕನಸು ನನಸಾಗಿದೆ :ನಟಿ ಮಯೂರಿ

ಬೆಂಗಳೂರು: ಸ್ಯಾಂಡಲ್ ನಟಿ ವುಡ್ ಚುಕ್ಕಿ ಚೆಲುವೆ ಮಯೂರಿ ಅವರು ಬ್ಯುಸಿಯಾಗಿದ್ದಾರೆ. ಸಾಲು ಸಾಲು ಚಿತ್ರಗಳನ್ನು ತಮ್ಮ ಕೈನಲ್ಲಿಟ್ಟುಕೊಂಡಿರುವ ಮಯೂರಿಯವರಿಗೆ ಬೇಡಿಕೆ ಕೂಡ ಹೆಚ್ಚಾಗಿದ್ದು, ಪ್ರಸ್ತುತ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರೊಂದಿಗೆ ನಟಿಸುವ ಅವಕಾಶ ಕೂಡ ಪಡೆದುಕೊಂಡಿದ್ದಾರೆ.

ರವಿವರ್ಮ ಅವರು ನಿರ್ದೇಶನದತ್ತ ಮುಖ ಮಾಡಿದ್ದು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರಿಗಾಗಿ ರುಸ್ತುಂ ಎನ್ನುವ ಕಥೆ ಮಾಡಿದ್ದಾರೆ. ಇನ್ನು ಕೆಲವೇ ದಿನಗಳಲ್ಲಿ ಚಿತ್ರದ ಚಿತ್ರೀಕರಣ ಆರಂಭವಾಗಲಿದ್ದು. ಚಿತ್ರದಲ್ಲಿ ಶಿವಣ್ಣ ಅವರೊಂದಿಗೆ ಪ್ರಮುಖ ಪಾತ್ರದಲ್ಲಿ ನಟಿ ಮಯೂರಿಯವರು ಕಾಣಿಸಿಕೊಳ್ಳಲಿದ್ದಾರೆ.

ತಮ್ಮ ಪಾತ್ರದ ಕುರಿತಂತೆ ಮಾತನಾಡಿರುವ ಮಯೂರಿಯವರು ಚಿತ್ರದ ಹೀರೋ ಆಗಿರುವ ಶಿವಣ್ಣ ಅವರೊಂದಿಗೆ ಪ್ರಮುಖ ಪಾತ್ರದಲ್ಲಿ ನಡೆಸುತ್ತಿದ್ದೇನೆಂದು ಹೇಳಿದ್ದಾರೆ. ಚಿತ್ರದ ಕುರಿತಂತೆ ಹೆಚ್ಚಿನ ಮಾಹಿತಿಗಳನ್ನು ಬಹಿರಂಗಪಡಿಸದಂತೆ ತಿಳಿಸಲಾಗಿದೆ. ಆದರೆ ಸತ್ಯ ಹೇಳಬೇಕೆಂದರೆ ಈ ದೊಡ್ಡ ಬ್ಯಾನ್ ನಲ್ಲಿ ಕೆಲಸ ಮಾಡುವ ನನ್ನ ಕನಸು ನನಸಾಗಿದೆ. ಚಿತ್ರದಲ್ಲಿ ಶಿವಣ್ಣ ಅವರ ಜೊತೆಗಿನ ಕೆಲಸ ದೊಡ್ಡ ಮೈಲುಗಲ್ಲಾಗಲಿದೆ ಎಂದು ಹೇಳಿದ್ದಾರೆ. ನನ್ನ ವ್ಯಕ್ತಿತ್ವವನ್ನು ಇಟ್ಟುಕೊಟ್ಟು ನಿರ್ದೇಶಕರು ಪಾತ್ರವನ್ನು ರಚನೆ ಮಾಡಿರುವ ವಿಚಾರ ತಿಳಿದಾಗ ಬಹಳಷ್ಟು ಸಂತೋಷವಾಯಿತು ಎಂದು ಹೇಳಿಕೊಂಡಿದ್ದಾರೆ.

 

About the author

ಕನ್ನಡ ಟುಡೆ

Leave a Comment