ರಾಜ್ಯ ಸುದ್ದಿ

ಶಿವಪೂಜೆ ಮಾಡಿದ ಸಿದ್ಧಗಂಗಾ ಶ್ರೀಗಳು

ತುಮಕೂರು: ಚೆನ್ನೈನ ರೇಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಡಾ.ಶಿವಕುಮಾರಸ್ವಾಮೀಜಿ ಮಂಗಳವಾರ ಎದ್ದು ಕುಳಿತು, ಕೊಂಚ ನಡೆದಾಡಿದ್ದಾರೆ, ನೀರು ಕುಡಿದಿದ್ದಾರೆ ಹಾಗೂ ಶಿವಪೂಜೆಯನ್ನೂ ಮಾಡಿದ್ದಾರೆ.

‘ವಿಕ’ದೊಂದಿಗೆ ಮಾತನಾಡಿದ ಶ್ರೀಗಳ ಆಪ್ತ ವೈದ್ಯ ಡಾ.ಪರಮೇಶ್‌ ಈ ವಿಷಯವನ್ನು ತಿಳಿಸಿದ್ದು, ”ಶ್ರೀಗಳು ಚೆನ್ನಾಗಿದ್ದಾರೆ. ಸದ್ಯ ಐಸಿಯುನಲ್ಲೇ ತಪಾಸಣೆ ನಡೆಯುತ್ತಿದೆ. ಬುಧವಾರದ ವೇಳೆಗೆ ವಿಶೇಷ ವಾರ್ಡ್‌ಗೆ ಶಿಫ್ಟ್‌ ಮಾಡಬಹುದು,” ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ಧಲಿಂಗಸ್ವಾಮಿಗಳು,ಸೋಂಕು ತಗುಲುವ ಸಾಧ್ಯತೆ ಹಿನ್ನೆಲೆಯಲ್ಲಿ ಸಿದ್ಧಗಂಗಾ ಮಠದ ಡಾ.ಶಿವಕುಮಾರಸ್ವಾಮೀಜಿಯನ್ನು ಐಸಿಯುನಿಂದ ವಿಶೇಷ ವಾರ್ಡ್‌ಗೆ ಶಿಫ್ಟ್‌ ಮಾಡುವ ಬಗ್ಗೆ ಆಸ್ಪತ್ರೆಯು ಇನ್ನೂ ಯಾವುದೇ ಖಚಿತ ನಿರ್ಧಾರ ತೆಗೆದುಕೊಂಡಿಲ್ಲ. ಶ್ರೀಗಳನ್ನು ವಾರ್ಡ್‌ಗೆ ಶಿಫ್ಟ್‌ ಮಾಡಿದ ಬಳಿಕವೇನಾದರೂ ಸೋಂಕು ತಗುಲಿದರೆ ತುಂಬಾ ಕಷ್ಟವಾಗುತ್ತದೆ ಎಂಬ ಮಾಹಿತಿಯನ್ನು ವೈದ್ಯರು ನೀಡಿದ್ದಾರೆ. ಬುಧವಾರ ಮತ್ತೆ ಶ್ರೀಗಳ ಆರೋಗ್ಯವನ್ನು ಸಮಗ್ರವಾಗಿ ತಪಾಸಣೆ ಮಾಡಿದ ಬಳಿಕ ವೈದ್ಯರು ಅಂತಿಮ ನಿರ್ಧಾರ ತೆಗೆದುಕೊಳ್ಳಲಿದ್ದಾರೆ. ಬುಧವಾರವೇ ಶಿಫ್ಟ್‌ ಮಾಡುತ್ತಾರೆಂದು ಹೇಳಲು ಬರುವುದಿಲ್ಲ,” ಎಂದು ತಿಳಿಸಿದ್ದಾರೆ.

About the author

ಕನ್ನಡ ಟುಡೆ

Leave a Comment