ರಾಜಕೀಯ

ಶಿವಮೊಗ್ಗದಲ್ಲಿ ಹಣ ಹಂಚುವಾಗ ಸಿಕ್ಕಿಬಿದ್ದ ಬಿಜೆಪಿ ಕಾರ್ಯಕರ್ತ

ಶಿವಮೊಗ್ಗ  : ಇದು ರಾಜ್ಯದ ಮೈತ್ರಿ ಸರ್ಕಾರ ಮತ್ತು ರಾಜ್ಯ ಬಿಜೆಪಿ ನಾಯಕರಿಗೆ ಪ್ರತಿಷ್ಠೆಯ ಕಣವಾಗಿದೆ. ಮತದಾರನ ಮನವೊಲಿಸಲು ಪಕ್ಷಗಳು ಕೊನೆ ಕಸರತ್ತಿನಲ್ಲಿ ತೊಡಗಿವೆ. ಈ ನಡುವೆ ಬಿಜೆಪಿ ಕಾರ್ಯಕರ್ತರು ಮತದಾರರಿಗೆ ಹಣ ಹಂಚುವ ವೇಳೆ ಸಿಕ್ಕಿಬಿದ್ದಿದ್ದಾರೆ.

ಶಿವಮೊಗ್ಗ ನಗರದ ವಿನೋಬನಗರದಲ್ಲಿ ಕಾಂಗ್ರೆಸ್‌-ಜೆಡಿಎಸ್ ಕಾರ್ಯಕರ್ತರು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ, ಮತದಾರರಿಗೆ ಹಂಚಲು ತಂದಿದ್ದ 1.50 ಲಕ್ಷ ರೂಪಾಯಿಯನ್ನು ವಶಕ್ಕೆ ಪಡೆದು ವಿನೋಬ ನಗರ ಪೊಲೀಸರಿಗೆ ಒಪ್ಪಿಸಿದ್ದಾರೆ.

ಇದೇ ರೀತಿಯಾಗಿ ಜಿಲ್ಲೆಯ ಸಾಗರ, ಸೊರಬದಲ್ಲಿ ಹಣವನ್ನು ಹಂಚಲಾಗಿದೆ ಎನ್ನಲಾಗಿದೆ. ಮನೆ ಮನೆಗೆ ಬೂತ್ ಸ್ಲಿಪ್ ಹಂಚುವ ನೆಪದಲ್ಲಿ ಬಿಜೆಪಿ ಕಾರ್ಯಕರ್ತರು, ಹಣ ಹಂಚುತ್ತಿದ್ದಾರೆ ಎಂದು ಕಾಂಗ್ರೆಸ್‌-ಜೆಡಿಎಸ್‌ ಕಾರ್ಯಕರ್ತರು ಆರೋಪಿಸಿದ್ದಾರೆ.

About the author

ಕನ್ನಡ ಟುಡೆ

Leave a Comment