ರಾಜ್ಯ ಸುದ್ದಿ

ಶಿವಮೊಗ್ಗ: ಯಡಿಯೂರಪ್ಪ ಮನೆಗೆ ಪೊಲೀಸ್‌ ಬಂದೋಬಸ್ತ್

ಶಿವಮೊಗ್ಗ: ಆಪರೇಷನ್‌ ಕಮಲ ವಿರೋಧಿ ಸಿ ಕಾಂಗ್ರೆಸ್‌ ಪ್ರತಿಭಟನೆ ನಡೆಸುತ್ತಿದ್ದ ಹಿನ್ನೆಲೆಯಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರ ನಿವಾಸಕ್ಕೆ ಬುಧವಾರ ಪೊಲೀಸ್‌ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು. ಮುನ್ನೆಚ್ಚರಿಕೆ ಕ್ರಮವಾಗಿ ಇಲ್ಲಿನ ವಿನೋಬನಗರದಲ್ಲಿರುವ ಬಿಎಸ್‌ವೈ ನಿವಾಸದ ಬಳಿ ಡಿಎಆರ್‌ ಪೊಲೀಸರನ್ನು ನೇಮಕ ಮಾಡಲಾಗಿತ್ತು. ಮನೆಯ ಸುತ್ತ ಬ್ಯಾರಿಕೇಡ್‌ ಹಾಕಲಾಗಿತ್ತು. ಆದರೆ ಸಂಜೆಯಾದರೂ ಯಾವುದೇ ಕಾಂಗ್ರೆಸ್‌ ಮುಖಂಡರು, ಕಾರ್ಯಕರ್ತರು ಮನೆಯತ್ತ ಸುಳಿದಿರ ಲಿಲ್ಲ. ಎನ್‌ಎಸ್‌ಯುಐ ವತಿಯಿಂದ ನಗರದ ಶಿವಪ್ಪ ನಾಯಕ ಸರ್ಕಲ್‌ ಬಳಿ ಮಾತ್ರ ಪ್ರತಿಭಟನೆ ನಡೆಯಿತು.

 

About the author

ಕನ್ನಡ ಟುಡೆ

Leave a Comment