ರಾಷ್ಟ್ರ ಸುದ್ದಿ

ಶೀಘ್ರದಲ್ಲೆ ಬರಲಿದೆ 200 ಹೊಸ ನೋಟು

ಹೊಸದಿಲ್ಲಿ : ಭಾರತೀಯ ರಿಸರ್ವ್‌ ಬ್ಯಾಂಕ್‌ ಶೀಘ್ರದಲ್ಲೇ 200 ರೂ. ಮೌಲ್ಯದ ನೋಟುಗಳನ್ನು ಪರಿಚಯಿಸಲಿದೆ. ಅಂತೆಯೇ ಅದು 200 ರೂ. ನೋಟುಗಳ ಮುದ್ರಣಕ್ಕೆ ಆದೇಶ ನೀಡಿದೆ ಎಂದು ಎಎನ್‌ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

200 ರೂ. ನೋಟುಗಳನ್ನು ಪರಿಚಯಿಸುವ ನಿರ್ಧಾರವನ್ನು ಆರ್‌ಬಿಐ ಕಳೆದ ಮಾರ್ಚ್‌ ತಿಂಗಳಲ್ಲೇ ಹಣಕಾಸು ಸಚಿವಾಲಯದ ಜತೆಗೆ ಸಮಾಲೋಚಿಸಿ ಕೈಗೊಂಡಿತ್ತು.

ಈಗಿನ್ನು ಆರ್‌ಬಿಐ ಶೀಘ್ರವೇ 200 ರೂ. ನೋಟು ಚಲಾವಣೆಗೆ ತರುವ ಕುರಿತಾಗಿ ಅಧಿಸೂಚನೆಯನ್ನು ಹೊರಡಿಸಲಿದೆ.

ಪ್ರಧಾನಿ ನರೇಂದ್ರ ಮೋದಿ ಅವರು 500 ರೂ. ಹಾಗೂ 1,000 ರೂ. ನೋಟುಗಳನ್ನು ಅಮಾನ್ಯ ಮಾಡಿದ ಸರಿಸುಮಾರು ಎಂಟು ತಿಂಗಳ ಬಳಿಕ ಆರ್‌ಬಿಐ ಇದೇ ಮೊದಲ ಬಾರಿಗೆ 200 ರೂ. ನೋಟುಗಳನ್ನು ಮುದ್ರಿಸಿ ಚಲಾವಣೆಗೆ ತರಲು ಮುಂದಾಗಿದೆ.

About the author

ಕನ್ನಡ ಟುಡೆ

Leave a Comment