ರಾಜ್ಯ ಸುದ್ದಿ

ಶೀಘ್ರದಲ್ಲೇ ವಿಷ್ಣು ಸ್ಮಾರಕ ಕುರಿತು ನಿರ್ಧಾರ ಕೈಗೊಳ್ಳುತ್ತೇನೆ: ಸಿಎಂ ಕುಮಾರಸ್ವಾಮಿ

ಬೆಂಗಳೂರು: ನಟ ಅಂಬರೀಷ್​ ಅಗಲಿಕೆ ನಂತರ ಮುನ್ನೆಲೆಗೆ ಬಂದಿರುವ ನಟ ವಿಷ್ಣುವರ್ಧನ್​ ಅವರ ಸ್ಮಾರಕ ವಿಚಾರವಾಗಿ ಸಾಕಷ್ಟು ಚರ್ಚೆಯಾಗುತ್ತಿದ್ದು, ಈ ವಿಚಾರದಲ್ಲಿ ಗೊಂದಲ ಬೇಡ ಎಂದು ಮುಖ್ಯಮಂತ್ರಿ ಎಚ್​.ಡಿ. ಕುಮಾರಸ್ವಾಮಿ ಅವರು ಟ್ವೀಟ್​ ಮಾಡಿದ್ದಾರೆ.

ಡಾ ರಾಜಕುಮಾರ್, ವಿಷ್ಣುವರ್ಧನ್ ಹಾಗೂ ಅಂಬರೀಷ್​ರಂತಹ ಮಹನೀಯರನ್ನು ಸ್ಮರಿಸುವ ವಿಚಾರದಲ್ಲಿ ನಾನು ಬದ್ಧನಿದ್ದೇನೆ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಅತಿ ಶೀಘ್ರದಲ್ಲಿ ವಿಷ್ಣುವರ್ಧನ್ ಅವರ ಸ್ಮಾರಕ ಕುರಿತು ನಿರ್ಧಾರ ಕೈಗೊಳ್ಳುತ್ತೇನೆ ಎಂದು ಸಿಎಂ ಕುಮಾರಸ್ವಾಮಿ ಅವರು ಟ್ವೀಟ್​ ಮೂಲಕ ಭರವಸೆ ನೀಡಿದ್ದಾರೆ.

ಸಾಹಸಸಿಂಹ ವಿಷ್ಣುವರ್ಧನ್ ಅವರು ಡಿಸೆಂಬರ್​ 30, 2009ರಂದು ವಿಧಿವಶರಾದರು. ಮುಂದಿನ ತಿಂಗಳ 30 ರಂದು 9ನೇ ವರ್ಷದ ಪುಣ್ಯ ಸ್ಮರಣೆ ನಡೆಯಲಿದ್ದು, ಕನಸಾಗೇ ಉಳಿದಿರುವ ವಿಷ್ಣು ಸ್ಮಾರಕದ ಕುರಿತು ಅಭಿಮಾನಿಗಳು ಧ್ವನಿಯೆತ್ತಿದ್ದಾರೆ. ಅಲ್ಲದೆ, ಸ್ಮಾರಕ ಕುರಿತು ನಟ ಹಾಗೂ ಶಾಸಕ ಬಿ.ಸಿ.ಪಾಟೀಲ್​ ಹಾಗೂ ನವರಸನಾಯಕ ಜಗ್ಗೇಶ್​ ಕೂಡ ಟ್ವೀಟ್​ ಮೂಲಕ ಆಗ್ರಹಿಸಿದ್ದು, ನಟ ಸುದೀಪ್​ ನೇತೃತ್ವದಲ್ಲಿ ವಿಷ್ಣು ಅಭಿಮಾನಿಗಳ ನಿಯೋಗವೊಂದು ಮುಂದಿನವಾರ ಸಿಎಂರನ್ನು ಭೇಟಿ ಮಾಡಿ ಚರ್ಚಿಸಲಿದೆ ಎಂದು ತಿಳಿದುಬಂದಿದೆ.

About the author

ಕನ್ನಡ ಟುಡೆ

Leave a Comment