ಕ್ರೀಡೆ

ಶೂಟಿಂಗ್ ವಿಶ್ವಕಪ್: ಮನು ಭಾಕರ್, ಸೌರಭ್ ಚೌಧರಿ ಜೊಡಿಗೆ ಚಿನ್ನ

ನವದೆಹಲಿ: ಭಾರತದ ಮಹತ್ವದ ಶೂಟಿಂಗ್ ಜೋಡಿ ಮನು ಭಾಕರ್, ಸೌರಭ್ ಚೌಧರಿ ಅವರು ಐಎಸ್ ಎಸ್ ಎಫ್ ಶೂಟಿಂಗ್ ವಿಶ್ವಕಪ್ ನಲ್ಲಿ 10 ಮೀ. ಏರ್ ಪಿಸ್ತೂಲ್ ಮಿಕ್ಸೆಡ್ ಟೀಮ್ ಇವೆಂಟ್ ನಲ್ಲಿ ಚಿನ್ನದ ಪದಕ ಗಳಿಸಿಕೊಂಡಿದೆ. ಬುಧವಾರ ನಡೆದ ಪಂದ್ಯದಲ್ಲಿ ಸೌರಭ್ ಹಾಗೂ ಮನು ಬಾಕರ್ ಒಟ್ಟು 483.4 ಅಂಕಗಳನ್ನು ಗಳಿಸಿಮೊದಲ ಸ್ಥಾನ ಪಡೆದಿದ್ದಾರೆ.ಇದೇ ಸ್ಪರ್ಧೆಯಲ್ಲಿ ಚೀನಾ ಜೋಡಿ 477.7 ಅಂಕಗಳೊಡನೆ ಎರಡನೇ ಸ್ಥಾನ ಗಳಿಸಿಕೊಂಡಿದೆ. ಇದಕ್ಕೆ ಮುನ್ನ ನಡೆದ ಅರ್ಹತಾ ಸುತ್ತಿನಲ್ಲಿ ಈ ಮನು-ಸೌರಭ್ ಜೋಡಿ 778 ಅಂಕಗಳೊಡನೆ ಮೊದಲ ಸ್ಥಾನ ಗಳಿಸಿ ಫೈನಲ್ ತಲುಪಿದ್ದರು ಭಾರತದ ಇನ್ನೊಂದು ಜೋಡಿ ಹಿನಾ ಸಿಧು ಹಾಗೂಅಭಿಷೇಕ್ ವರ್ಮಾ 770 ಅಂಕದೊಡನೆ ಒಂಬತ್ತನೇ ಸ್ಥಾನ ಪಡೆದು ಫೈನಲ್ ಪ್ರವೇಶಿಸಲು ವಿಫಲವಾಗಿದೆ.

About the author

ಕನ್ನಡ ಟುಡೆ

Leave a Comment