ರಾಜ್ಯ ಸುದ್ದಿ

ಶೂಟೌಟ್ ಹೇಳಿಕೆ ಸಂಬಂಧ ಸಿಎಂ ವಿರುದ್ಧ ದೂರು: ಕ್ಷಮೆ ಕೋರಲು ಒಪ್ಪದ ಸಿಎಂ

ಬೆಂಗಳೂರು: ಜೆಡಿಎಸ್ ಕಾರ್ಯಕರ್ತ ಕೊಲೆ ಆರೋಪಿಗಳನ್ನು ಶೂಟೌಟ್‌ ಮಾಡಿ ಎಂದು ಹೇಳಿಕೆ ನೀಡಿರುವ ಸಿಎಂ ಎಚ್‌.ಡಿ ಕುಮಾರಸ್ವಾಮಿ ವಿರುದ್ಧ ರಾಜ್ಯ ಮಾನವ ಹಕ್ಕುಗಳ ಆಯೋಗಕ್ಕೆ ದೂರು ಸಲ್ಲಿಕೆಯಾಗಿದೆ.
”ಸಂವಿಧಾನಾತ್ಮಕವಾಗಿ ಸ್ಥಾಪಿಸಲಾಗಿರುವ ಕಾನೂನಿನಡಿ ಕೆಲಸ ಮಾಡುವುದಾಗಿ ವಿಧಾನಸಭೆಯಲ್ಲಿ ಪ್ರಮಾಣವಚನ ಸ್ವೀಕರಿಸಿರುವ ಹಾಗೂ ಸಂವಿಧಾನದ ಉನ್ನತ ಹುದ್ದೆಯಲ್ಲಿರುವ ಮುಖ್ಯಮಂತ್ರಿಗಳು ನೀಡಿರುವ ಹೇಳಿಕೆ ಸಂವಿಧಾನಬಾಹಿರವಾಗಿದೆ. ಆ ರೀತಿಯ ಆದೇಶ ನೀಡಿರುವ ಎಚ್‌.ಡಿ ಕುಮಾರಸ್ವಾಮಿ ಅವರಿಂದ ಸ್ಪಷ್ಟನೆ ನೀಡಬೇಕು ಎಂದು ದೂರಿನಲ್ಲಿ ಒತ್ತಾಯಿಸಲಾಗಿದೆ. ಸಂವಿಧಾನಾತ್ಮಕ ಹುದ್ದೆಯಲ್ಲಿರುವವರು ಜೀವಗಳ ರಕ್ಷಣೆಗೆ ಬದ್ಧರಾಗಿರಬೇಕಾಗುತ್ತದೆಯೇ ಹೊರತು ಜೀವ ತೆಗೆಯುವುದಕ್ಕೆ ಆದೇಶ ಮಾಡುವುದಕ್ಕಲ್ಲ ಎಂದು ಪಿಯುಸಿಎಲ್‌ನ ರಾಜ್ಯ ಅಧ್ಯಕ್ಷ ಪ್ರೊ. ವೈ.ಜೆ ರಾಜೇಂದ್ರ ಅಭಿಪ್ರಾಯಪಟ್ಟಿದ್ದಾರೆ.
ಇನ್ನೂ ತಮ್ಮ ಹೇಳಿಕೆ ಸಂಬಂಧ ಸಿಎಂ ಕುಮಾರ ಸ್ವಾಮಿ ಕ್ಷಮೆ ಕೋರಬೇಕು ಎಂದು ಬಿಜೆಪಿ ಆಗ್ರಹಿಸಿತ್ತು,ಆದರೆ ಯಾವುದೇ ಕಾರಣಕ್ಕೂ ಕ್ಷಮೆ ಕೇಳುವುದಿಲ್ಲ ಎಂದು ಸಿಎಂ ಕುಮಾರ ಸ್ವಾಮಿ ಹೇಳಿದ್ದಾರೆ,

About the author

ಕನ್ನಡ ಟುಡೆ

Leave a Comment