ರಾಷ್ಟ್ರ ಸುದ್ದಿ

ಶೇ.99 ರಷ್ಟು ಪದಾರ್ಥಗಳನ್ನು ಶೇ.18 ಜಿಎಸ್‏ಟಿ ವ್ಯಾಪ್ತಿಗೆ ತರುವುದು ನಮ್ಮ ಗುರಿ: ಪ್ರಧಾನಿ ಮೋದಿ

ಮುಂಬೈ: ಶೇ, 99 ರಷ್ಟು ಪದಾರ್ಥಗಳನ್ನು ಶೇ. 18  ಜಿಎಸ್ ಟಿ ವ್ಯಾಪ್ತಿಗೆ ತರುವುದು ಸರ್ಕಾರದ ಗುರಿಯಾಗಿದೆ ಎಂದಿರುವ ಪ್ರಧಾನಿ ನರೇಂದ್ರ ಮೋದಿ, ಬ್ಯಾಂಕುಗಳಿಗೆ ಸಾಲ ಮರುಪಾವತಿಸದೆ ವಿದೇಶದಲ್ಲಿರುವ ದೇಶಭ್ರಷ್ಟ ಆರ್ಥಿಕ ಅಪರಾಧಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಜಿಎಸ್ ಟಿ ತೆರಿಗೆ ಜಾರಿ  ಮುನ್ನ 55 ಲಕ್ಷ ಉದ್ಯಮಗಳುನೋಂದಾಯಿತಗೊಂಡಿದ್ದವು. ಆದರೆ. ಈಗ ಅವುಗಳ ಸಂಖ್ಯೆ 65 ಲಕ್ಷ ಆಗಿದೆ.  ಶೇ, 99 ರಷ್ಟು ಪದಾರ್ಥಗಳನ್ನು ಶೇ. 18 ಜಿಎಸ್ ಟಿ ವ್ಯಾಪ್ತಿಗೆ ತರುವ ನಿಟ್ಟಿನಲ್ಲಿ ಸರ್ಕಾರ ಕಾರ್ಯೋನ್ಮುಖವಾಗಿರುವುದಾಗಿ ತಿಳಿಸಿದರು.

ಬ್ಯಾಂಕುಗಳಿಂದ ಸಾಲ ಪಡೆದು ಮರುಪಾವತಿಸದೆ ದೇಶದಿಂದ ತಪ್ಪಿಸಿಕೊಂಡು ಬೇರೆ ದೇಶಗಳಿಗೆ ಪಲಾಯನ ಮಾಡದಂತೆ ತಡೆಯಲು ದೇಶಭ್ರಷ್ಟ ಆರ್ಥಿಕ ಅಪರಾಧಿಗಳ ಕಾಯ್ದೆ 2018 ಕಾಯ್ದೆಗೆ ತಿದ್ದುಪಡಿ ತರಲಾಗಿದ್ದು, ಕಾನೂನಿಂದ ತಪ್ಪಿಸಿಕೊಳ್ಳುವ ಮುಂಚೆ ನ್ಯಾಯಾಧೀಶರ ಎದುರು ಹಾಜರುಪಡಿಸುವ ರೀತಿಯಲ್ಲಿ ಬದಲಾವಣೆ ಮಾಡಲಾಗಿದೆ ಎಂದರು.ಆಗಸ್ಟಾ ವೆಸ್ಟ್ ಲ್ಯಾಂಡ್ ಹಗರಣದ ಪ್ರಮುಖ ಶಂಕಿತ ಆರೋಪಿ  ಕ್ರಿಶ್ಚಿಯನ್ ಮೈಕೆಲ್  ಅವರನ್ನು ಭಾರತಕ್ಕೆ ತರಲಾಗುತ್ತದೆ ಎಂದು ನಾಲ್ಕು ವರ್ಷಗಳ ಹಿಂದೆ ಯಾರೂ  ಅಂದುಕೊಂಡಿದ್ದರು?  ಎಂದು ರಿಪಬ್ಲಿಕ್  ಸುದ್ದಿವಾಹಿನಿ ಆಯೋಜಿಸಿದ್ದ ಭಾರತ ಆರ್ಥಿಕ ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ಮಾತನಾಡುತ್ತಿದ್ದರು.ತಮ್ಮ ಆಡಳಿತವಧಿಯಲ್ಲಿನ  ದೇಶದ ಪ್ರಗತಿ ಬಗ್ಗೆ ಸಮಗ್ರ ಮಾಹಿತಿ ನೀಡಿದ ಪ್ರಧಾನಿ ಮೋದಿ, ದೇಶದ ಆರ್ಥಿಕ ಕ್ಲಬ್ ಗೆ 5 ಟ್ರಿಲಿಯನ್ ಡಾಲರ್  ಸೇರಿಸುವ ನಿಟ್ಟಿನಲ್ಲಿ ಸರ್ಕಾರ ಕ್ರಮ ಕೈಗೊಂಡಿದೆ. ಜಲ ಮಾರ್ಗದಿಂದ ಹಿಡಿದು ವಿಮಾನಯಾನವರೆಗೂ ದೇಶದ ಎಲ್ಲಾ ವಲಯಗಳಲ್ಲಿ ಅಭಿವೃದ್ಧಿಯಾಗಿದ್ದು,  ಭಾರತ ಜಾಗತಿ ಮಟ್ಟದಲ್ಲಿ ಪೈಪೋಟಿ ನಡೆಸುವಂತಾಗಿದೆ ಎಂದು  ತಿಳಿಸಿದರು.ದೇಶದ ಆರ್ಥಿಕ ಬೆಳವಣಿಗೆ ದರ ತ್ವರಿತಗತಿಯಲ್ಲಿ ಮುಂದುವರೆಯು್ತ್ತಿದ್ದು, ವಿಶ್ವದ ರಾಷ್ಟ್ರಗಳ ಮುಂದೆ ಭಾರತದ ವರ್ಚಸ್ಸು ವೃದ್ದಿಸಿದೆ. ಸುಲಭ ವ್ಯವಹಾರ ಮಾಡುವ ರಾಷ್ಟ್ರಗಳ ಪೈಕಿ ಭಾರತ 142 ನೇ ಸ್ಥಾನದಿಂದ 77ಕ್ಕೆ ಸ್ಥಾನಕ್ಕೆ ಜಿಗಿತ ಕಂಡಿದೆ. ಹವಾನಿಯಂತ್ರಿತ ರೈಲಿನಲ್ಲಿ ಚಲಿಸಲು ಆಗಲ್ಲ ಎನ್ನುವವರು ಸದ್ಯದಲ್ಲೆ ಹೆಲಿಕಾಪ್ಟರ್ ನಲ್ಲಿ ಓಡಾಡುವಂತಾಗಲಿದೆ. 1 ಸಾವಿರ ಹೊಸ ಹೆಲಿಕಾಪ್ಟರ್  ಖರೀದಿಯ ಅಗತ್ಯವಿದೆ ಎಂದು ನರೇಂದ್ರ ಮೋದಿ ಹೇಳಿದರು.ಆಟೋ ಚಾಲಕರು, ತರಕಾರಿ ವ್ಯಾಪಾರಿಗಳು, ಟೀ- ಮಾರಾಟಗಾರರು ಈಗ ಭೀಮ್ ಆಪ್ ಬಳಸುತ್ತಿದ್ದು, ಅವರ ಪಾಕೆಟ್ ನಲ್ಲಿ  ಡೆಬಿಟ್ ಕಾರ್ಡ್ ಇಟ್ಟುಕೊಂಡಿದ್ದಾರೆ. ಸ್ವದೇಶದಲ್ಲಿಯೇ ತಯಾರಿಸಿರುವ ಗಂಟೆಗೆ 180 ಕಿಲೋ ಮೀಟರ್ ವೇಗದಲ್ಲಿ ಸಂಚರಿಸುವ ಇಂಜಿನ್ ರಹಿತ ಟ್ರೈನ್ ಪ್ರಾಯೋಗಿಕ ಪರೀಕ್ಷೆಯನ್ನು ಈಗಾಗಲೇ ಮುಗಿಸಲಾಗಿದೆ ಎಂದು ಅವರು ಹೇಳಿದರು.ಭಾರತ 100 ಉಪಗ್ರಹಗಳನ್ನು ಉಡಾಯಿಸಲಿದೆ ಎಂಬುದು ಯಾರಿಗಾದರೂ ಗೊತಿತ್ತಾ  ಎಂದು ಪ್ರಶ್ನಿಸಿರುವ ಪ್ರದಾನಿ 2022ರೊಳಗೆ ಇಸ್ರೋ ಗಗನಯಾನ ಮಿಷನ್ ಕೈಗೊಳ್ಳುವ ನಿಟ್ಟಿನಲ್ಲಿ ಪ್ರಯತ್ನ ನಡೆಸುತ್ತಿದೆ ಎಂದು  ನರೇಂದ್ರಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

About the author

ಕನ್ನಡ ಟುಡೆ

Leave a Comment