ದೇಶ ವಿದೇಶ

ಶೋಪಿಯಾನ್ ಫೈರಿಂಗ್ ತನಿಖೆಗೆ ಕಾಂಗ್ರೆಸ್ ಆಗ್ರಹ

ಜಮ್ಮು : ಇಬ್ಬರು ಉಗ್ರರೊಂದಿಗೆ ನಾಲ್ವರು ಪೌರರು ಭದ್ರತಾ ಪಡೆಗಳ ಗುಂಡಿಗೆ ಬಲಿಯಾಗಿರುವ ಶೋಪಿಯಾನ್‌ ಫೈರಿಂಗ್‌ ಪ್ರಕರಣದ ಬಗ್ಗೆ ಜಮ್ಮು ಕಾಶ್ಮೀರ ಪ್ರದೇಶ ಕಾಂಗ್ರೆಸ್‌ ಸಮಿತಿ (ಜೆಕೆಪಿಸಿಸಿ) ತನಿಖೆಗೆ ಆಗ್ರಹಿಸಿದೆ.

ಸೇನೆಯ ಗುಂಡಿಗೆ ಪೌರರು ಬಲಿಯಾಗಿರುವುದು ಅತ್ಯಂತ ನೋವಿನ ಸಂಗತಿಯಾಗಿದೆ. ಈ ಬಗ್ಗೆ ಸೇನೆ ಕೊಟ್ಟಿರುವ ಸ್ಪಷ್ಟೀಕರಣದ ಬಗ್ಗೆ ಜನರು ತೃಪ್ತರಾಗಿಲ್ಲ ಎಂದು ಜಕೆಪಿಸಿಸಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಶೋಪಿಯಾನ್‌ ಫೈರಿಂಗ್‌ನಲ್ಲಿ ಮೃತಪಟ್ಟ ನಾಲ್ವರು ಪೌರರು ಅಮಾಯಕರು; ಪೊಲೀಸ್‌ ಎನ್‌ಕೌಂಟರ್‌ ನೆಪದಲ್ಲಿ ನಡೆದಿರುವ ಅವರ ಹತ್ಯೆ ಅಸಮರ್ಥನೀಯ. ಅಮಾಯಕರ ಈ ರೀತಿಯ ಹತ್ಯೆ ಸರಿಯಲ್ಲ. ಈ ಘಟನೆಯ ಬಗ್ಗೆ ತನಿಖೆಯಾಗಬೇಕು; ಪೌರರ ಈ ಹತ್ಯೆಗಳು ರಾಜ್ಯದಲ್ಲಿನ ಪಿಡಿಪಿ-ಬಿಜೆಪಿ ದುರಾಡಳಿತೆಗೆ ಸಾಕ್ಷಿಯಾಗಿವೆ; ಅದುದರಿಂದ ರಾಜ್ಯ ಸರಕಾರ ಇದಕ್ಕೆ ಹೊಣೆಯಾಗಿದೆ ಎಂದು ಜೆಕೆಪಿಸಿಸಿ ಹೇಳಿದೆ.

 

About the author

Pradeep Kumar T R

Leave a Comment