ಸಿನಿ ಸಮಾಚಾರ

ಶ್ರೀದೇವಿ ನನ್ನ ತಂಗಿಯ ಸಮಾನವೆಂದು ಹೇಳಿದ  ಕಮಲ್ ಹಾಸನ್

ತಮಿಳನಾಡು: ಶ್ರೀದೇವಿ ತನಗೆ ತಂಗಿ ಸಮಾನ ಎಂದು  ನಟ ಕಮಲ್ ಹಾಸನ್ ಹೇಳಿದ್ದಾರೆ.ಶ್ರೀದೇವಿ ಮತ್ತು ತಮ್ಮ ಬಗ್ಗೆ ಮಾಧ್ಯಮಗಳಲ್ಲಿ ಬರುತ್ತಿರುವ ಕಲ್ಪಿನಿಕ ಕಥೆಗಳ ಬಗ್ಗೆ ಅವರು ನಿರಾಸೆಯನ್ನು ವ್ಯಕ್ತಪಡಿಸಿದ್ದಾರೆ.

ಶ್ರೀದೇವಿ ತನಗೆ ಸಹೋದರಿ ಇದ್ದಂತೆ ಮತ್ತು ನಾನು ಅವರ ತಾಯಿ ಬಳಿ ಕೈತುತ್ತು ತಿಂದಿದ್ದೇನೆಂದು ಹೇಳಿ ಕೊಂಡಿದ್ದಾರೆ. ಸಿನಿಮಾಗಳಲ್ಲಿ ನಮ್ಮ ನಟನೆ ನೋಡಿದರೆ ಒಡಹುಟ್ಟಿದವರಂತೆ ಕಾಣುತ್ತೇವೆಎಂದಿದ್ದಾರೆ.

ಆ ದಿನಗಳಲ್ಲಿ ಯಾರೇ ಅನ್ಯೋನ್ಯ ದಂಪತಿಗಳನ್ನು ನೋಡಿದರೂ ಕಮಲ್-ಶ್ರೀದೇವಿ ಜೋಡಿ ತರಹ ಇದ್ದೀರಾ ಎನ್ನುತ್ತಿದ್ದರು. ತೆರೆಯ ಮೇಲೆ ನಮ್ಮಿಬ್ಬರ ಹಾಡು ಅಪ್ಪುಗೆ ನೋಡಿ ಆ ರೀತಿ ಹೋಲಿಕೆ ಮಾಡುತ್ತಿದ್ದರು. ಆದರೆ ನಾವು ನಿಜ ಹೇಳಿ ಅಂತಹ ದಂಪತಿಗಳನ್ನು ನಿರಾಸೆಪಡಿಸಲು ನಮಗೂ ಇಷ್ಟವಿರಲಿಲ್ಲ ಎಂದು ಹೇಳುತ್ತಿದ್ದಾರೆ ಕಮಲ್ ಹಾಸನ್.

ನಮ್ಮಿಬ್ಬರ ಬಗ್ಗೆ ಇಲ್ಲ ಸಲ್ಲದ ವದಂತಿಗಳನ್ನು ಹಬ್ಬಿಸಬೇಡಿ ಎಂದು ಮಾಧ್ಯಮದ ವರದಿಗಳಿಗೆ ಮನವಿ ಮಾಡಿದ್ದಾರೆ. ಕಾಲಿವುಡ್‌ನಲ್ಲಿ ಶ್ರೀದೇವಿ ಮತ್ತು ಕಮಲ್ ಹಾಸನ್ ಜೋಡಿ ಅತ್ಯಂತ ಯಶಸ್ವಿ ಎನ್ನಿಸಿಕೊಂಡಿತ್ತು. ಇವರಿಬ್ಬರ ಕಾಂಬಿನೇಷನ್‌ನಲ್ಲಿ ಬಂದಂತಹ ಸಿನಿಮಾಗಳು ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಕಲೆಕ್ಷನ್ ಮಾಡಿದ್ದವು.

 

 

About the author

ಕನ್ನಡ ಟುಡೆ

Leave a Comment