ಸಿನಿ ಸಮಾಚಾರ

ಶ್ರೀದೇವಿ ಬಂಗ್ಲೊ ಚಿತ್ರದಲ್ಲಿ ನಟನೆ; ಕಣ್ಸನ್ನೆ ಬೆಡಗಿ ಪ್ರಿಯಾಗೆ ಬೋನಿ ಕಪೂರ್ ನೋಟಿಸ್

ತಮ್ಮ ಕಣ್ಸನ್ನೆ ಮೂಲಕ ದೇಶಾದ್ಯಂತ ಜಗತ್ ಪ್ರಸಿದ್ಧಿ ಗಳಿಸಿರುವ ಪ್ರಿಯಾ ಪ್ರಕಾಶ್ ವಾರಿಯರ್ ಗೆ ಸಂಕಷ್ಟ ಎದುರಾಗಿದ್ದು ಅತಿಲೋಕ ಸುಂದರಿ ಶ್ರೀದೇವಿ ಅವರ ಪಾತ್ರದಲ್ಲಿ ಪ್ರಿಯಾ ಕಾಣಿಸಿಕೊಂಡಿರುವುದಕ್ಕೆ ನಿರ್ಮಾಪಕ ಬೋನಿ ಕಪೂರ್ ಸಿಟ್ಟಾಗಿದ್ದಾರೆ.
 
ಶ್ರೀದೇವಿ ಜೀವನಾಧಾರಿತ ಶ್ರೀದೇವಿ ಬಂಗ್ಲೊ ಚಿತ್ರದ ಟ್ರೈಲರ್ ಸದ್ದಿಲ್ಲದೆ ಬಿಡುಗಡೆಯಾಗಿದ್ದು ಪ್ರಿಯಾ ಪ್ರಕಾಶ್ ನಟಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ಪ್ರಿಯಾ ಅಭಿನಯದ ಮೊದಲ ಚಿತ್ರ ಒರು ಆಡರ್ ಲವ್ ಇನ್ನು ಬಿಡುಗಡೆಯಾಗಿಲ್ಲ ಅದಾಗಲೇ ಎರಡನೇ ಚಿತ್ರದಲ್ಲಿ ಶ್ರೀದೇವಿ ಅವರ ಪಾತ್ರದಲ್ಲಿ ಕಾಣಿಸಿಕೊಂಡಿದ್ದು ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಇನ್ನು ಟ್ರೈಲರ್ ಕುರಿತಂತೆ ಶ್ರೀದೇವಿ ಅವರ ಪತಿ ಬೋನಿ ಕಪೂರ್ ಅವರು ಪ್ರಿಯಾ ವಾರಿಯರ್ ಹಾಗೂ ಚಿತ್ರತಂಡಕ್ಕೆ ಲೀಗಲ್ ನೋಟಿಸ್ ಕಳಿಸಿದ್ದಾರೆ. ಇನ್ನು ಈ ಕುರಿತಂತೆ ಚಿತ್ರತಂಡ ಈ ಚಿತ್ರ ಒಂದು ಸಸ್ಪೆನ್ಸ್-ಥ್ರಿಲ್ಲರ್ ಕಥೆಯಾಗಿದೆ. ಚಿತ್ರಕ್ಕೆ ಕೇವಲ ಶ್ರೀದೇವಿ ಅವರ ಹೆಸರನ್ನು ಇಡಲಾಗಿದೆ ಎಂದು ಸ್ಪಷ್ಟಿಕರಣ ನೀಡಿದೆ. ಇನ್ನು ಶ್ರೀದೇವಿ ಬಂಗ್ಲೊ ಚಿತ್ರದ ಕುರಿತಂತೆ ಅಭಿಮಾನಿಗಳಲ್ಲಿ ಸಾಕಷ್ಟು ಅನುಮಾನಗಳು ಹುಟ್ಟುತ್ತಿದೆ. ಅರಾತ್ ಎಂಟರ್ ಟೈನ್ ಮೆಂಟ್ ಬ್ಯಾನರ್ ಅಡಿ ಚಿತ್ರ ನಿರ್ಮಾಣವಾಗಿದೆ.

About the author

ಕನ್ನಡ ಟುಡೆ

Leave a Comment