ರಾಷ್ಟ್ರ

ಶ್ರೀದೇವಿ ಸರ್ಕಾರಿ ಅಂತ್ಯಕ್ರಿಯೆ ಮಹಾರಾಷ್ಟ್ರ ಮುಖ್ಯಮಂತ್ರಿ ನಿರ್ದೇಶನದಂತೆ ನಡೆದಿದೆ

ಮುಂಬೈ: ದುಬೈನಲ್ಲಿ ಸಾವನ್ನಪ್ಪಿದ ಹಿರಿಯ ಬಾಲಿವುಡ್ ನಟಿ ಶ್ರೀದೇವಿ ಅವರ ಅಂತ್ಯ ಸಂಸ್ಕಾರವನ್ನು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರ ನಿರ್ದೇಶನದಂತೆ ನಡೆಸಲಾಗಿದೆ ಎಂದು ಆರ್ ಟಿ ಐ ತಿಳಿಸಿದೆ.

ನಟಿ ಶ್ರಿದೇವಿ ಅವರಿಗೆ ರಾಜ್ಯ ಸರ್ಕಾರದ ಗೌರವದೊಂದಿಗೆ ಅಂತ್ಯ ಸಂಸ್ಕಾರ ಮಾಡಿದ ಸಂಬಂಧ ಅದರ ಬಗ್ಗೆ ವಿವರಣೆ ಕೋರಿ ಆರ್ ಟಿ ಐ ಕಾರ್ಯಕರ್ತ ಅನಿಲ್ ಗಲಗಲಿ ಅರ್ಜಿ ಸಲ್ಲಿಸಿದ್ದರು.

ಇದಕ್ಕೆ ಉತ್ತರಿಸಿರುವ ಆರ್ ಟಿಐ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ ಅವರ ನಿರ್ದೇಶನದಂತೆ ಸಕಲ ಸರ್ಕಾರಿ ಗೌರವಗಳೊಂದಿಗೆ ಶ್ರೀದೇವಿ ಅಂತ್ಯ ಸಂಸ್ಕಾರ ನೆರವೇರಿದೆ ಎಂದು ತಿಳಿಸಿದೆ. ಶ್ರೀದೇವಿ ಅವರು ಪದ್ಮಶ್ರೀ ಪ್ರಶಸ್ತಿ ಪಡೆದಿದ್ದಾರೆಂದು ಅವರಿಗೆ ಸರ್ಕಾರಿ ಗೌರವ ನೀಡಿಲ್ಲ.

ರಾಜ್ಯ ಸರ್ಕಾರ ವಿವೇಚನೆಯಿಂದ ಶಿಷ್ಟಾಚಾರ ಪಾಲಿಸಿ ಈ ಗೌರವ ನೀಡಿದೆ ಎಂದು ವಿವರಣೆ ಹೇಳಿಕೆ ನೀಡಿದೆ. ಫೆಬ್ರವರಿ 24 ರಂದು ದುಬೈನಲ್ಲಿ ಶ್ರೀದೇವಿ ಮೃತ ಪಟ್ಟಿದ್ದರು. ನಟಿ ಶ್ರೀದೇವಿಗೆ ಸರ್ಕಾರಿ ಗೌರವಗಳೊಂದಿಗೆ ಅಂತ್ಯ ಸಂಸ್ಕಾರ ನಡೆಸಿದ್ದನ್ನು ನವನಿರ್ಮಾಣ ಸೇನೆಯ ರಾಜ್ ಠಾಕ್ರೆ ಖಂಡಿಸಿದ್ದಾರೆ.

 

About the author

ಕನ್ನಡ ಟುಡೆ

Leave a Comment