ರಾಷ್ಟ್ರ ಸುದ್ದಿ

ಶ್ರೀನಗರದಲ್ಲಿ ಮೋದಿ ಅಲೆ, ಖಾಲಿ ದಾಲ್ ಲೇಕ್ ನಲ್ಲಿ ಕೈಬಿಸಿ ಟ್ರೋಲ್ ಆದ ಪ್ರಧಾನಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚಿಗೆ ಜಮ್ಮು ಮತ್ತು ಕಾಶ್ಮೀರದ ದಾಲ್ ಸರೋವರದಲ್ಲಿ ವಿಹಾರ ನಡೆಸಿದ್ದು, ಈ ವೇಳೆ ಲೇಕ್ ನಲ್ಲಿ ಯಾರೂ ಇಲ್ಲದಿದ್ದರೂ ಪ್ರಧಾನಿ ಕೈ ಬಿಸುತ್ತಿರುವ ದೃಶ್ಯವನ್ನು ನೆಟ್ಟಿಗರು ಟ್ರೋಲ್ ಮಾಡಿದ್ದಾರೆ.
ಕಾಶ್ಮೀರಕ್ಕೆ ಪ್ರಧಾನಿ ಮೋದಿ ಭೇಟಿ ಖಂಡಿಸಿ ಪ್ರತ್ಯೇಕವಾದಿಗಳ ಗುಂಪು ಕಣಿವೆ ರಾಜ್ಯ ಸಂಪೂರ್ಣ ಬಂದ್ ಗೆ ಕರೆ ನೀಡಿದ್ದವು. ಹೀಗಾಗಿ ಸಾಮಾನ್ಯ ಜನಜೀವನದ ಮೇಲೆ ಬಂದ್ ಪರಿಣಾಮ ಬೀರಿತ್ತು. ಬಂದ್ ನಡುವೆಯೇ ಬಿಗಿ ಭದ್ರತೆಯೊಂದಿಗೆ ಪ್ರಧಾನಿ ಮೋದಿ ಕಾಶ್ಮೀರಕ್ಕೆ ಭೇಟಿ ನೀಡಿ,  ದಾಲ್​​ ಸರೋವರದಲ್ಲಿ ದೋಣಿ ವಿಹಾರ ನಡೆಸಿದ ವಿಡಿಯೋವನ್ನು ಗುಜರಾತ್ ಬಿಜೆಪಿ ಟ್ವೀಟ್ ಮಾಡಿದೆ. ಈ ವಿಡಿಯೋದಲ್ಲಿ ಪ್ರಧಾನಿ ಮೋದಿ ಯಾರತ್ತ ಕೈಬಿಸುತ್ತಿದ್ದಾರೆ ಎಂಬುದು ಕಾಣಿಸುತ್ತಿಲ್ಲ. ಹೀಗಾಗಿ ನೆಟ್ಟಿಗರು ಖಾಲಿ ಲೇಕ್ ನಲ್ಲಿ ಪ್ರಧಾನಿ ಮೋದಿ ಯಾರತ್ತ ಕೈಬಿಸುತ್ತಿದ್ದಾರೆ ಎಂಬುದನ್ನು ದೇಶಕ್ಕೆ ತಿಳಿಸಬೇಕು ಎಂದು ಟ್ರೋಲ್ ಮಾಡಿದ್ದಾರೆ.
ಕಳೆದ ಭಾನುವಾರ ಜಮ್ಮು-ಕಾಶ್ಮೀರ ಪ್ರವಾಸದ್ದ ಪ್ರಧಾನಿ ಮೋದಿ ಅಂದು ಬೆಳಗ್ಗೆ ಲೇಹ್​ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಬಳಿಕ ದಾಲ್ ಲೇಕ್ ಗೆ ಭೇಟಿ ನೀಡಿದ್ದರು.

About the author

ಕನ್ನಡ ಟುಡೆ

Leave a Comment