ರಾಷ್ಟ್ರ ಸುದ್ದಿ

ಶ್ರೀನಗರ: ಬಾರಾಮುಲ್ಲಾದಲ್ಲಿ ಮತ ಹಾಕಲು ಬಾರದ ಮತದಾರರು

ಶ್ರೀನಗರ: ಉಗ್ರರ ಉಪಟಳ ಹೆಚ್ಚಿರುವ, ಭಾರತೀಯ ಸೇನೆ ಹೆಚ್ಚು ಬಾರಿ ಉಗ್ರರನ್ನು ಸದೆ ಬಡಿದ ಪ್ರದೇಶ ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾದಲ್ಲಿ ಮತದಾನ ಪ್ರಕ್ರಿಯೆ ನೀರಸ ಪ್ರದರ್ಶನ ಕಂಡು ಬಂದಿದೆ. ಬಾರಾಮುಲ್ಲಾ ಜಿಲ್ಲೆಯ ಕುಪ್ವಾರದ ಬಾಬ್‌ಗುಂಡ್‌ ಪ್ರದೇಶದ ಮತದಾರರಂತೂ ಸಂಪೂರ್ಣವಾಗಿ ಚುನಾವಣೆ ಬಹಿಷ್ಕರಿಸಿದಂತೆ ಕಂಡು ಬಂದಿದೆ.

ಉತ್ತರ ಕಾಶ್ಮೀರದ ಬಾರಾಮುಲ್ಲಾ ಲೋಕಸಭಾ ಕ್ಷೇತ್ರದ ಭಾಗವಾಗಿರುವ ಸೋಪೋರ್‌ನಲ್ಲಿ ಗುರುವಾರ ಸಂಜೆ 3 ಗಂಟೆಯ ವರೆಗೆ ಮತದಾನ ನಡೆದಿದ್ದು, ಸುಮಾರು 1 ಲಕ್ಷ ಮತದಾರರ ಪೈಕಿ ಕೇವಲ ಶೇ.3ರಷ್ಟು ಮತದಾನವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕಳೆದ ಲೋಕಸಭೆ ಚುನಾವಣೆಗೆ ಹೋಲಿಸಿದರೆ ಮತದಾನದ ಪ್ರಮಾಣ ಹೆಚ್ಚಾಗಿದೆ. 2014ರಲ್ಲಿ ಸೋಪೋರ್‌ನಲ್ಲಿ ಕೇವಲ 1.08% ಮತದಾನ ನಡೆದಿತ್ತು. ರಾಷ್ಟ್ರ ಅತಿಕಡಿಮೆ ಮತದಾನ ಕಂಡ ಪ್ರದೇಶ ಎಂದೇ ಗುರುತಿಸಲಾಗಿತ್ತು.

ಬಾರಾಮುಲ್ಲಾ, ಕುಪ್ವಾರ ಮತ್ತು ಬಂಡಿಪೋರಾ ಪ್ರದೇಶಗಳನ್ನು ಹೊಂದಿರುವ ಬಾರಾಮುಲ್ಲಾ ಲೋಕಸಭಾ ಕ್ಷೇತ್ರದಲ್ಲಿ ಸುಮಾರು 35% ಮತದಾನ ನಡೆದಿದೆ. ಸೋಪೋರ್‌ನ ಬ್ರಾತ್‌ಕಲನ್‌ನಲ್ಲಿ 0% ಮತದಾನ ನಡೆದಂತೆ ಕಂಡುಬಂದಿದೆ. ಲೋಕಸಭೆ ಚುನಾವಣೆ 2019ರ ಮೊದಲ ಹಂತದ ಮತದಾನ ಏಪ್ರಿಲ್‌ 11ರಂದು 18 ರಾಜ್ಯಗಳ 91 ಲೋಕಸಭಾ ಕ್ಷೇತ್ರಗಳಲ್ಲು ಚುನಾವಣೆ ನಡೆಯಿತು. ಆಂಧ್ರಪ್ರದೇಶದಲ್ಲಿ ಟಿಆರ್‌ಎಸ್‌ ಮತ್ತು ವೈಎಸ್‌ಆರ್‌ ಕಾಂಗ್ರೆಸ್‌ ಕಾರ್ಯಕರ್ತರ ನಡುವೆ ಮಾರಾಮಾರಿ ಸಂಭವಿಸಿ ಮೂವರು ಹತ್ಯೆ ನಡೆದಿದೆ.

About the author

ಕನ್ನಡ ಟುಡೆ

Leave a Comment