ರಾಜ್ಯ ಸುದ್ದಿ

ಬೆಂಗಳೂರು: ಶ್ರೀರಾಮಪುರ ಮೆಟ್ರೋ ಎಸ್ಕಲೇಟರ್ ನಿಂದ ಬಿದ್ದು ಪುಟ್ಟ ಮಗು ಸಾವು

ಬೆಂಗಳೂರು: ಶ್ರೀರಾಮಪುರ ಮೆಟ್ರೋ ನಿಲ್ದಾಣದಲ್ಲಿ ಚಲಿಸುತ್ತಿದ್ದ ಎಸ್ಕಲೇಟರ್ ನಿಂದ ಬಿದ್ದಿದ್ದ 2ವರ್ಷದ ಪುಟ್ಟ ಮಗು ಹಾಸಿನಿ ಚಿಕಿತ್ಸೆ ಫಲಕಾರಿಯಾಗದೆ ಇಂದಿರಾಗಾಂಧಿ ಆಸ್ಪತ್ರೆಯಲ್ಲಿ ಸೋಮವಾರ ಸಾವನ್ನಪ್ಪಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಭಾನುವಾರ ರಾತ್ರಿ ಅಜ್ಜನ ಜೊತೆ ತೆರಳಿದ್ದ 2ವರ್ಷದ ಹೆಣ್ಣು ಮಗುವೊಂದು ಆಯತಪ್ಪಿ ಎಸ್ಕಲೇಟರ್ ನಿಂದ ಕೆಳಗೆ ಬಿದ್ದು ಮಗು ಗಂಭೀರವಾಗಿ ಗಾಯಗೊಂಡಿತ್ತು. ಕೂಡಲೇ ಮಗುವನ್ನು ಕೆಸಿ ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆಗೆ ದಾಖಲಿಸಲಾಗಿತ್ತು ಎಂದು ವರದಿ ತಿಳಿಸಿದೆ.

ಅಜ್ಜ, ಅಜ್ಜಿ ಜೊತೆ ತೆರಳುತ್ತಿದ್ದ ವೇಳೆ ಮಗು ಆಯತಪ್ಪಿ ಬಿದ್ದ ಘಟನೆ ನಡೆದಿದ್ದು, ಮೆಟ್ರೋ ಅಧಿಕಾರಿಗಳು ಸೂಕ್ತವಾದ ಸುರಕ್ಷತಾ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿ ಸುಬ್ರಹ್ಮಣ್ಯ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಮಗುವಿನ ಅಜ್ಜ ನೀಡಿದ ದೂರಿನ್ವಯ ಪೊಲೀಸರು ಮೆಟ್ರೋ ಅಧಿಕಾರಿಗಳ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ.

About the author

ಕನ್ನಡ ಟುಡೆ

Leave a Comment