ರಾಜ್ಯ ಸುದ್ದಿ

ಶ್ರೀರಾಮುಲು ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿ ಆಗಲಿದ್ದಾರೆ: ಶಾಸಕ ವಿ. ಸೋಮಣ್ಣ

ಬಳ್ಳಾರಿ: ಶಾಸಕ ಶ್ರೀರಾಮುಲು ಅವರು ರಾಜ್ಯದ ಮುಂದಿನ ಮುಖ್ಯಮಂತ್ರಿ ಆಗಲಿದ್ದಾರೆ ಎಂದು ಬಿಜೆಪಿ ಶಾಸಕ ವಿ ಸೋಮಣ್ಣ ಅವರು ಬಳ್ಳಾರಿಯಲ್ಲಿ ಭವಿಷ್ಯ ನುಡಿದಿದ್ದಾರೆ. ಸುದ್ಧಿಗಾರರೊಂದಿಗೆ ಮಾತನಾಡಿದ ಅವರು ಯಡಿಯೂರಪ್ಪ ನಂತರ ಶ್ರೀರಾಮುಲು ಅವರು ಈ ರಾಜ್ಯದ ಮುಖ್ಯಮಂತ್ರಿಯಾಗಲಿದ್ದಾರೆ. ರಾಷ್ಟ್ರಕ್ಕೆ ನರೇಂದ್ರ ಮೋದಿ ಅವರು ಹೇಗೋ ಹಾಗೇ ಬಳ್ಳಾರಿಗೆ ಶಾಸಕ ಶ್ರೀರಾಮುಲು ಎಂದು ಸೋಮಣ್ಣ ಶ್ಲಾಘಿಸಿದರು.

ನಾನು ಸಾಕಷ್ಟು ಉಪಚುನಾವಣೆಗಳನ್ನು ಎದುರಿಸಿದ್ದೇನೆ. ಹತ್ತಾರು ಚುನಾವಣೆಗಳಲ್ಲಿ ಭಾಗಿಯಾಗಿದ್ದೇನೆ. ಒಬ್ಬ ಪ್ರತಿಷ್ಠಿತ ವ್ಯಕ್ತಿಯಾಗಿ, ಬಡತನದಿಂದ ಬಂದು ಇಡೀ ಜಿಲ್ಲೆಯಲ್ಲಿ ತನ್ನದೇಯಾದಂತಹ ಪ್ರಭಾವವನ್ನು ನಮ್ಮ ಪಕ್ಷದ ಮುಖಂಡ ಹಾಗೂ ಮಾಜಿ ಸಚಿವರಾಗಿರುವ ಶ್ರೀರಾಮುಲು ಅವರು ಬೆಳಸಿಕೊಂಡಿದ್ದು, ಯಾವುದೇ ಪಕ್ಷದವರು ಅವರ ನಡೆನುಡಿಯನ್ನು ಮುಕ್ತ ಕಂಠದಿಂದ ಹೊಗಳುವ ವ್ಯಕ್ತಿತ್ವವನ್ನು ಹೊಂದಿದ್ದಾರೆ ಎಂದು ಪ್ರಶಂಸಿಸಿದರು.

About the author

ಕನ್ನಡ ಟುಡೆ

Leave a Comment