ಅ೦ತರಾಷ್ಟ್ರೀಯ ರಾಜ್ಯ

ಶ್ರೀ ಶ್ರೀ ರವಿಶಂಕರ್ ಗುರೂಜಿಗೆ ಸೈಮನ್ ವೀಸೆನ್ತಾಲ್ ಅಂತಾರಾಷ್ಟ್ರೀಯ ನಾಯಕತ್ವ ಪ್ರಶಸ್ತಿ.

ಅಮೆರಿಕದ ಲಾಸ್‌ಏಂಜಲಿಸ್‌ ನ ಮ್ಯೂಸಿಯಂ ಆಫ್ ಟಾಲರೆನ್ಸ್ ನಲ್ಲಿ ನಡೆದ ಕಾಯ೯ಕ್ರಮದಲ್ಲಿ ಆರ್ಟ್ ಆಫ್ ಲೀವಿಂಗ್ ನ ಶ್ರೀ ಶ್ರೀ ರವಿಶಂಕರ್ ಗುರೂಜಿ ಅವರಿಗೆ ಪ್ರತಿಷ್ಠಿತ ಸೈಮನ್ ವೀಸೆನ್ತಾಲ್ ಅಂತಾರಾಷ್ಟ್ರೀಯ ನಾಯಕತ್ವ ಪ್ರಶಸ್ತಿ ನೀಡಿ ಗೌರವಿಸಲಾಯಿತು.– ಮಾನವ ಘನತೆ ಹೆಚ್ಚಿಸಲು, ಅಂತರ್ಧಾರ್ಮಿಕ ಸಂಬಂಧಗಳು ಮತ್ತು ಜನರ ನಡುವೆ ಸಹನೆ ಮೂಡಿಸಲು – ಗುರೂಜಿ ಶ್ರಮಿಸುತ್ತಿರುವ ಹಿನ್ನೆಲೆಯಲ್ಲಿ ಈ ಪ್ರಶಸ್ತಿ ನೀಡಲಾಗಿದೆ.

ಈ ವೇಳೆ ಆರ್ಟ್ ಆಫ್ ಲೀವಿಂಗ್  ಕ್ಯಾಲಿಫೋರ್ನಿಯಾದಲ್ಲಿ ಸಲ್ಲಿಸುತ್ತಿರುವ ಅತ್ಯುತ್ತಮ ಸೇವೆಗಾಗಿ ಸಂಸತ್ತಿನ ಶ್ಲಾಘನಾ ಪತ್ರ ನೀಡಲಾಯಿತು. ಈ ಮೊದಲು ಅಂತಾರಾಷ್ಟ್ರೀಯ ನಾಯಕತ್ವ ಪ್ರಶಸ್ತಿಯನ್ನು ಕೆನಡಾದ ಮಾಜಿಪ್ರಧಾನಿ ಸ್ಟೀಫನ್ ಹಾರ್ಪರ್ ಮತ್ತು ಟ್ರಾಮ್ ಕ್ರೂಸ್ ಅವರಿಗೆ ನೀಡಲಾಗಿತ್ತು. ಪ್ರಶಸ್ತಿ ಸಮಾರಂಭದಲ್ಲಿ ಜಪಾನ್, ಸ್ವೀಡನ್, ಬ್ರೆಜಿಲ್, ಮೆಕ್ಸಿಕೊ, ಜರ್ಮನಿ, ಇಟಲಿ ಸೇರಿದಂತೆ 12 ದೇಶಗಳ ರಾಯಭಾರಿಗಳು, ಅಮೆರಿಕದ ಸಂಸದರು, ಕ್ಯಾಲಿಫೋರ್ನಿಯಾದ 28 ನಗರಗಳಕೌನ್ಸಿಲ್ಸದಸ್ಯರುಭಾಗವಹಿಸಿದ್ದರು.

About the author

ಕನ್ನಡ ಟುಡೆ

Leave a Comment