ರಾಜ್ಯ ಸುದ್ದಿ

ಸಂಕ್ರಾಂತಿ ಬಳಿಕ ಮತ್ತೆ ಬಿಜೆಪಿ ರಹಸ್ಯ ಚಟುವಟಿಕೆ

ಬೆಂಗಳೂರು: ಸರಕಾರ ರಚನೆ ಬಗ್ಗೆ ಬಿಜೆಪಿ ಪ್ರಯತ್ನ ಕೈ ಚೆಲ್ಲಿತೇ ಎನ್ನುತ್ತಿರುವಾಗಲೇ, ಮತ್ತೊಂದು ಸುತ್ತಿನ ಕಾರ್ಯಾಚರಣೆ ದಿಲ್ಲಿಯಲ್ಲಿ ಸದ್ದಿಲ್ಲದೇ ನಡೆದಿದೆ. ಸಂಕ್ರಾಂತಿ ಬಳಿಕ ಮೈತ್ರಿ ಸರಕಾರ ಅಲ್ಲಾಡಿಸುವ ಪ್ರಯತ್ನ ನಡೆಯಲಿದೆ.

ಮುಂದಿನ ಐದು ದಿನಗಳ ಕಾಲ ಶಿವಮೊಗ್ಗ ಬಿಟ್ಟು ಕದಲುವುದಿಲ್ಲ ಎಂದು ಪ್ರತಿಕ್ರಿಯೆ ನೀಡುವ ಮೂಲಕ ತೆರೆಮರೆಯಲ್ಲಿ ನಡೆಯುತ್ತಿದ್ದ ‘ಆಪರೇಷನ್‌ ಕಮಲ’ ಕಾರ್ಯಾಚರಣೆಗೆ ಸ್ಪಷ್ಟನೆ ನೀಡಲು ಪ್ರಯತ್ನಿಸಿದ್ದ ಯಡಿಯೂರಪ್ಪ ಮಂಗಳವಾರ ಬೆಳಗ್ಗೆ ದಿಢೀರನೇ ದಿಲ್ಲಿಗೆ ತೆರಳಿ ಅಷ್ಟೇ ವೇಗವಾಗಿ ಬೆಂಗಳೂರಿಗೆ ವಾಪಸ್‌ ಆಗಿದ್ದಾರೆ. ಬೆಳಗ್ಗೆಯಿಂದ ಸಂಜೆಯವರೆಗೆ ಅವರು ದಿಲ್ಲಿಯಲ್ಲಿ ನಡೆಸಿದ ಕಾರ್ಯಚಟುವಟಿಕೆಗಳೆಲ್ಲವೂ ಮೈತ್ರಿ ಸರಕಾರಕ್ಕೆ ಅಶುಭಪ್ರದವಾಗಿದೆ ಎಂದೇ ಹೇಳಲಾಗುತ್ತಿದೆ. ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಜತೆಗೆ ಯಡಿಯೂರಪ್ಪ ಮಾತುಕತೆ ನಡೆಸಿದ್ದಾರೆ ಎಂದು ಉನ್ನತ ಮೂಲಗಳಿಂದ ತಿಳಿದು ಬಂದಿದೆ. ಆದರೆ, ಲೋಕಸಭೆ ಚುನಾವಣೆ ಸಿದ್ಧತೆಗಾಗಿ ಅಮಿತ್‌ ಶಾ ಅವರು ಯಡಿಯೂರಪ್ಪಗೆ ಬುಲಾವ್‌ ನೀಡಿದ್ದರು ಎಂದು ಬಿಜೆಪಿ ಮೂಲಗಳು ಹೇಳಿವೆ.

About the author

ಕನ್ನಡ ಟುಡೆ

Leave a Comment