ರಾಜ್ಯ ಸುದ್ದಿ

ಸಂಪುಟದಿಂದ ಕೈಬಿಟ್ಟರೂ ನಾನು ಒಪ್ಪಿಕೊಳ್ಳುತ್ತೇನೆ ಎಂದ ಜಮೀರ್‌ ಅಹಮದ್‌

ಬೆಳಗಾವಿ: ಸಂಪುಟ ವಿಸ್ತರಣೆಯು ಆಗುತ್ತದೆ. ಆ ಕುರಿತು ಯಾವುದೇ ಗೊಂದಲ ಇಲ್ಲ. ಸಂಪುಟದಿಂದ ನನ್ನನ್ನು ಕೈಬಿಟ್ಟರೂ ನಾನು ಒಪ್ಪಿಕೊಳ್ಳುತ್ತೇನೆ ಎಂದು ಸಚಿವ ಜಮೀರ್‌ ಅಹಮದ್‌ ಖಾನ್‌ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿ, 22ಕ್ಕೆ ಸಂಪುಟ ವಿಸ್ತರಣೆ ಇದೆ. ಸಚಿವ ಸಂಪುಟ ವಿಸ್ತರಣೆ ಆಗೇ ಆಗುತ್ತದೆ. ಆ ಕುರಿತು ಗೊಂದಲ ಇಲ್ಲ. ಹೆಚ್ಚುವರಿ ಖಾತೆ ಬದಲಾಯಿಸಿದರೆ ನಮಗೇನು ಸಮಸ್ಯೆ ಇಲ್ಲ. ಸಚಿವ ಸಂಪುಟದಿಂದ ನನ್ನನ್ನು ಕೈಬಿಟ್ಟರೂ ಒಪ್ಪಿಕೊಳ್ಳುತ್ತೇನೆ. ಹೈಕಮಾಂಡ್ ತೀರ್ಮಾನಕ್ಕೆ ನಾವು ಬದ್ಧ. ಅಲ್ಪಸಂಖ್ಯಾತ ಸಮುದಾಯಕ್ಕೆ ಇನ್ನೆರಡು ಸ್ಥಾನ ಕೇಳಿದ್ದೇವೆ. ಈ ಚುನಾವಣೆಯಲ್ಲಿ ನಮ್ಮ ಪಕ್ಷಕ್ಕೆ 80 ಸ್ಥಾನ ಬಂದಿದೆ ಅಂದರೆ ಅದಕ್ಕೆ ಅಲ್ಪಸಂಖ್ಯಾತ ಸಮುದಾಯವೂ ಕಾರಣವಾಗಿದೆ ಎಂದು ಹೇಳಿದರು.

ಅನ್ವರ್ ಮಾನ್ಪಾಡಿ ವರದಿ ಮಂಡನೆಗೆ ಹೈಕೋರ್ಟ್ ಆದೇಶ ನೀಡಿದೆ. ಆದರೆ, ಏನು ಮಾಡಿದೆ ಅಂತ ವಿವರ ಗೊತ್ತಿಲ್ಲ. ಮಾಹಿತಿ ಪಡೆಯಲು ಕಾರ್ಯದರ್ಶಿ ಜತೆ ಚರ್ಚೆಸುತ್ತೇವೆ. ಕೋರ್ಟ್ ಆದೇಶ ಪ್ರತಿ ಕೈ ಸೇರಿದ ಬಳಿಕ ಪರಿಶೀಲಿಸಿ ಕ್ರಮಕೈಗೊಳ್ಳಲಾಗುತ್ತದೆ ಎಂದರು.

ಹೆಬ್ಬೆಟ್ಟು ಮುಖ್ಯಮಂತ್ರಿ ಎಂಬ ಹೊರಟ್ಟಿ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಅದು ಅವರ ವೈಯಕ್ತಿಕ ಅಭಿಪ್ರಾಯವಾಗಿದೆ. ಮುಖ್ಯಮಂತ್ರಿಗೆ ಎಲ್ಲ ಸ್ವಾತಂತ್ರ್ಯ ಕೊಡಲಾಗಿದೆ. ನಾವು ಯಾವುದೇ ರೀತಿಯ ಒತ್ತಡ ಹಾಕಿಲ್ಲ. ಕುಮಾರಸ್ವಾಮಿ ಅವರೇ ಐದು ವರ್ಷ ಮುಖ್ಯಮಂತ್ರಿ ಎಂದು ಹೈಕಮಾಂಡ್ ನಿರ್ಧರಿಸಿದೆ ಎಂದು ತಿಳಿಸಿದರು.

About the author

ಕನ್ನಡ ಟುಡೆ

Leave a Comment