ರಾಷ್ಟ್ರ

ಸಂರಕ್ಷಿತ ಪ್ರದೇಶ ಪರವಾನಗಿ (Protected area permit).

ಪ್ರವಾಸಿಗರಿಗೆ ಗಡಿ ಪ್ರದೇಶಗಳನ್ನು ಪ್ರವೇಶಿಸಲು ಅವಕಾಶ ನೀಡಲು “ಸಂರಕ್ಷಿತ ಪ್ರದೇಶ ಪರವಾನಗಿ” (ಪಿಪಿಪಿ)ಯನ್ನು ನೀಡಲು ಕೇಂದ್ರ ಗೃಹ ಸಚಿವಾಲಯವು ಯೋಜಿಸಿದೆ. ಅರುಣಾಚಲ ಪ್ರದೇಶ, ಹಿಮಾಚಲ ಪ್ರದೇಶ, ಸಿಕ್ಕಿಂ, ಉತ್ತರಾಖಂಡ್, ನಾಗಾಲ್ಯಾಂಡ್, ಮಣಿಪುರ ಮತ್ತು ಪ್ರವಾಸೋದ್ಯಮ ಸಚಿವಾಲಯಗಳು ಕೇಂದ್ರಕ್ಕೆ ಹಲವು ಬಾರಿ ಮನವಿಗಳನ್ನು ಮಾಡಿದ್ದವು.

ಏನಿದು…? 

Under the Foreigners (Protected Areas) Order, 1958 ಅಡಿಯಲ್ಲಿ, ರಾಜ್ಯಗಳ ಗಡಿ ಮತ್ತು ಅಂತರಾಷ್ಟ್ರೀಯ ಗಡಿಯ ನಡುವೆ ಇರುವ ಎಲ್ಲಾ ಪ್ರದೇಶಗಳನ್ನು ಸಂರಕ್ಷಿತ ಪ್ರದೇಶಗಳಾಗಿ ಘೋಷಿಸಲಾಗಿದೆ. ಉದಾ : ಸಂರಕ್ಷಿತ ಗಡಿ ಪ್ರದೇಶಗಳು : ಅರುಣಾಚಲ ಪ್ರದೇಶ, ಮಣಿಪುರ, ಮಿಜೋರಾಂ, ನಾಗಾಲ್ಯಾಂಡ್ ಮತ್ತು ಸಿಕ್ಕಿಂ, ಹಿಮಾಚಲ ಪ್ರದೇಶ, ರಾಜಸ್ಥಾನ, ಉತ್ತರಾಖಂಡ್ ಮತ್ತು ಜಮ್ಮು ಮತ್ತು ಕಾಶ್ಮೀರದ ಕೆಲವು ಭಾಗಗಳು. ಸಿಕ್ಕಿಂನ ಕೆಲವು ಭಾಗಗಳು ಸಂರಕ್ಷಿತ ಪ್ರದೇಶದ ಆಳ್ವಿಕೆಗೆ ಒಳಗಾಗುತ್ತವೆ ಮತ್ತು ಉಳಿದ ಭಾಗಗಳು ನಿರ್ಬಂಧಿತ ಪ್ರದೇಶದ ಆಳ್ವಿಕೆಗೆ ಒಳಗಾಗುತ್ತವೆ.

ಕಾರಣ..? 

ದೇಶದ ರಕ್ಷಣೆ, ಭದ್ರತೆಗಳ ಉದ್ದೇಶದಿಂದ ವಿದೇಶಿಯರನ್ನು ಇಂತಹ ಪ್ರದೇಶಗಳಿಗೆ ಅನುಮತಿಸುವುದಿಲ್ಲ.

About the author

Pradeep Kumar T R

Leave a Comment