ತಂತ್ರಜ್ಞಾನ

ಸಂವಹನ ಉಪಗ್ರಹ ಜಿಸ್ಯಾಟ್ -7ಎ ಉಡಾವಣೆಗೆ ಕ್ಷಣಗಣನೆ ಆರಂಭ

ನವದೆಹಲಿ: ದೇಶದ 35ನೇ ಸಂವಹನ ಉಪಗ್ರಹ ಉಡಾವಣೆಗೆ ಕ್ಷಣಗಣನೆ ಆರಂಭವಾಗಿದ್ದು, ಬುಧವಾರ ಸಂಜೆ 4.10ಕ್ಕೆ ಶ್ರೀಹರಿಕೋಟದ ಸತೀಶ್ ಧವನ್ ಬಾಹ್ಯಕಾಶ ಕೇಂದ್ರದಿಂದ ಜಿಸ್ಯಾಟ್ -7ಎ ಉಡಾವಣೆಯಾಗಲಿದೆ ಎಂದು ಮಂಗಳವಾರ ಭಾರತೀಯ ಬಾಹ್ಯಕಾಶ ಸಂಶೋಧನಾ ಸಂಸ್ಥೆ(ಇಸ್ರೋ) ತಿಳಿಸಿದೆ.
ಇಸ್ರೋ ಅಭಿವೃದ್ಧಿಪಡಿಸಿದ 2,250 ಕೆ.ಜಿ ತೂಕದ ಈ ಉಪಗ್ರಹವನ್ನು ಜಿಎಸ್ ಎಲ್ ವಿ-ಎಫ್ 11 ರಾಕೆಟ್ ಮೂಲಕ ಭೂಸ್ಥಿರ ಕಕ್ಷೆಗೆ ಸೇರಿಸಲಾಗುವುದು ಎಂದು ಇಸ್ರೋ ಹೇಳಿದೆ. ಈ ಉಪಗ್ರಹ ೮ ವರ್ಷಗಳ ಕಾಲ ಕಾರ್ಯನಿರ್ವಹಿಸಲಿದೆ, ಭಾರತೀಯ ಭೂ ಪ್ರದೇಶದಲ್ಲಿ ಗ್ರಾಹಕರಿಗೆ ಕ್ಯು-ಬ್ಯಾಂಡ್ ಸೇವೆಯನ್ನು ಕಲ್ಪಿಸುವಲ್ಲಿ ನೆರವಾಗಲಿದೆ ಎಂದು ಇಸ್ರೋ ತಿಳಿಸಿದೆ.
ಜಿಸ್ಯಾಟ್ -7ಎ ಉಪಗ್ರಹ,  ಕೆ-ಯು ಬ್ಯಾಂಡ್ ನಲ್ಲಿ ಸಂಪರ್ಕ ಒದಗಿಸಲಿದ್ದು, ಇದು ರೇಡಾರ್ ಸ್ಟೇಷನ್ಸ್ ಗಳ, ಏರ್ ಬೊರ್ನ್ ವಾರ್ನಿಂಗ್ ಅಂಡ್ ಕಂಟ್ರೋಲ್ ಏರ್ ಕ್ರಾಫ್ಟ್ ಮತ್ತು ವಾಯುನೆಲೆಗಳ ಮಧ್ಯೆ ಸುಧಾರಿತ ಸಂಪರ್ಕ ಜಾಲ ಒದಗಿಸಲು ಸೇನೆಗೆ ನೆರವಾಗಲಿದೆ.

About the author

ಕನ್ನಡ ಟುಡೆ

Leave a Comment