ರಾಷ್ಟ್ರ ಸುದ್ದಿ

ಸಂಸತ್ತಿನಲ್ಲಿ ಸಚಿವ ಅಠಾವಳೆ ಹಾಸ್ಯ ಚಟಾಕಿ: ಸಾಮಾಜಿಕ ಜಾಲತಾಣದಲ್ಲಿ ವೈರಲ್

ಹೊಸದಿಲ್ಲಿ: ಪ್ರತಿ ಬಾರಿಯೂ ಸಂಸತ್ತಿನಲ್ಲಿ ಕವಿತೆ ಹಾಗೂ ಹಾಸ್ಯ ಚಟಾಕಿ ಸಿಡಿಸುವ ಮೂಲಕ ವಿಭಿನ್ನವಾಗಿ ಗುರುತಿಸಿಕೊಂಡಿರುವ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ ರಾಮದಾಸ್ ಅಠಾವಳೆ , ಈಗ ಮತ್ತದೇ ಕಾರಣಕ್ಕೆ ಸುದ್ದಿಯಲ್ಲಿದ್ದಾರೆ.

ಗುರುವಾರ ಲೋಕಸಭೆಯಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ಮಹಾಘಟಬಂಧನ್‌ ವಿರುದ್ಧ ಹರಿಹಾಯ್ದರು. ಪ್ರಧಾನಿ ಬಳಿಕ ಮಾತನಾಡಲು ಎದ್ದು ನಿಂತ ಸಚಿವ ಅಠಾವಳೆ, ತಮ್ಮದೇ ಶೈಲಿಯಲ್ಲಿ ಭಾಷಣ ಆರಂಭಿಸಿದರು. ಈ ವೇಳೆ ಸಚಿವರು ಹೇಳಿದ ಕವಿತೆ ಕೇಳಿ ಸಂಪೂರ್ಣ ಸದನ ನಗೆಗಡಲಲ್ಲಿ ತೇಲಿ ಹೋಯಿತು. ಇದಕ್ಕೆ ಪ್ರಧಾನಿ ನರೇಂದ್ರ ಮೋದಿ ಕೂಡ ಹೊರತಾಗಿರಲಿಲ್ಲ. ಪ್ರತಿಸಲದಂತೆಯೇ ಸಚಿವರ ಈ ಭಾಷಣವೂ ವೈರಲ್ ಆಗಿದೆ. ಒಂದು ಬಾರಿ ನೀವು ಕೂಡ ವೀಡಿಯೋ ನೋಡಿ ನಕ್ಕು ಬಿಡಿ. ಸಂಸತ್ತನಲ್ಲಿ ಸವರ್ಣ ಆರಕ್ಷನ ಮಸೂದೆ ಕುರಿತು ಚರ್ಚೆ ನಡೆಯುತ್ತಿದ್ದ ಸಂದರ್ಭದಲ್ಲಿ ಸಚಿವ ರಾಮದಾಸ್ ಅಠಾವಳೆ, ಕವಿತೆ ಮೂಲಕ ತನ್ನದೆ ಆದ ವಿಶಿಷ್ಟ ಶೈಲಿಯಲ್ಲಿ ಮಸೂದೆ ಬೆಂಬಲಿಸದರು.

About the author

ಕನ್ನಡ ಟುಡೆ

Leave a Comment