ಸುದ್ದಿ

ಸಂಸದ ಜೋಶಿ ವಿರುದ್ಧ ದೂರು

ಹುಬ್ಬಳ್ಳಿ: ಶಾಂತಿಭಂಗ ಹಾಗೂ ಕೋಮು ಸೌರ್ಹಾದತೆಗೆ ದಕ್ಕೆ ಮಾಡುವ ಹೇಳಿಕೆ ಆರೋಪದಡಿಯಲ್ಲಿ ಸಂಸದ ಪ್ರಹ್ಲಾದ್ ಜೋಶಿ ವಿರುದ್ದ ಕೇಸ್ ದಾಖಲಾಗಿದೆ. ಕಸಬಾ ಪೇಟೆ ಪೊಲೀಸ್ ಠಾಣೆಯಲ್ಲಿ ಮಹಮ್ಮದ್ ಹನೀಫ್ ಕೇಸ್ ದಾಖಲಿಸಿದ್ದಾರೆ.

ಮಾರ್ಚ್‌28 ರಂದು ಕಸಬಾ ಪೇಟೆ ಠಾಣಾ ವ್ಯಾಪ್ತಿಯ ಮಸೀದಿಗಳಲ್ಲಿ ಮಾರಕಾಸ್ತ್ರ ಇಟ್ಟಿದ್ದಾರೆಂದು ಜೋಶಿ ಹೇಳಿದ್ದರು. ಠಾಣಾ ವ್ಯಾಪ್ತಿಯ ಕೆಲವು ಪ್ರದೇಶ ಪಾಕಿಸ್ತಾನದ ರೀತಿ ಕಾಣುತ್ತದೆ ಎಂದೂ ಹೇಳಿದ್ದರು. ಈ ಹೇಳಿಕೆಗಳಿಗೆ ಮುಸ್ಲಿಂ ಮುಖಂಡರಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಆ ಹಿನ್ನಲೆಯಲ್ಲಿ ಸ್ಥಳೀಯರ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

About the author

ಕನ್ನಡ ಟುಡೆ

Leave a Comment