ಆಹಾರ

ಸಕ್ಕರೆ ಕಾಯಿಲೆಗೆ ಸಿಕ್ಕಿತು ಸಿಂಪಲ್ ಮನೆ ಮದ್ದು

ರಾಗಿಯಿಂದ ನಾವು ಏನೆಲ್ಲಾ ಮಾಡಿ ಸೇವಿಸುತ್ತೇವೆ ಅಲ್ವಾ, ರಾಗಿ ಮುದ್ದೆ, ಮಣ್ಣಿ, ಅಂಬಲಿ, ದೋಸೆ, ಇತ್ಯಾದಿ. ಈ ಪುಟಾಣಿ ಧಾನ್ಯದಲ್ಲಿ ದೇಹದ ಆರೋಗ್ಯವನ್ನು ಕಾಪಾಡುವ ಎಲ್ಲಾ ಶಕ್ತಿಯೂ ಇದೆ. ಪ್ರತಿ ದಿನ ಇದನ್ನು ಆಹಾರದಲ್ಲಿ ಬಳಸಿದರೆ ಹತ್ತು ಹಲವು ಅನಾರೋಗ್ಯಕ್ಕೆ ಮದ್ದಾಗಬಲ್ಲದು.

1. ಅಸ್ತಮಾ ಸಮಸ್ಯೆಯಿಂದ ಬಳಲುತ್ತಿರುವವರಿಗೆ ರಾಗಿ ಉತ್ತಮ ಆಹಾರ. ಇದು ಅರೋಗ್ಯ ವೃದ್ಧಿಸಿ ಅಸ್ತಮಾ ಬರದಂತೆ ತಡೆಗಟ್ಟುತ್ತದೆ.
2. ದೇಹದ ಮೂಳೆಗಳು ಸ್ಟ್ರಾಂಗ್ ಆಗಿಸುತ್ತದೆ. ಇದರಲ್ಲಿರುವ ಕ್ಯಾಲ್ಷಿಯಂ ಮತ್ತು ಮಿಟಮಿನ್ ಡಿ ಮಕ್ಕಳಿಗೆ ಹಾಗೂ ವೃದ್ಧರಿಗೆ ಅಗತ್ಯ ಪೋಷಕಾಂಶಗಳನ್ನು ನೀಡಿ ದೇಹವನ್ನು ಗಟ್ಟಿಮುಟ್ಟಾಗಿಸುತ್ತದೆ.
3. ರಾಗಿಯಲ್ಲಿ ಕ್ವೆರ್ಸೆಟಿನ್, ಸೆಲೆನಿಯಮ್ ಮತ್ತು ಪ್ಯಾಂಟೋಥೆನಿಕ್ ಆಮ್ಲದ ಅಂಶಗಳಿವೆ. ಇವು ದೇಹದಲ್ಲಿ ಕ್ಯಾನ್ಸರ್ ಕೋಶಗಳ ನಿವಾರಿಸುತ್ತದೆ.
4. ಮಹಿಳೆಯರನ್ನು ಹೆಚ್ಚಾಗಿ ಕಾಡುವ ರಕ್ತಹೀನತೆ ಬಹಳ ಅಪಾಯಕಾರಿ ಹಾಗೂ ಮಾರಣಾಂತಿಕ ಸಮಸ್ಯೆ. ರಾಗಿಯಲ್ಲಿ ಕೆಂಪು ರಕ್ತ ಕಣಗಳ ರಚನೆಗೆ ಬೇಕಾದ ಹಿಮೋಗ್ಲೋಬಿನ್ ಅಂಶ ಹೆಚ್ಚಾಗಿದೆ. ಇದರಿಂದ ರಕ್ತಹೀನತೆಯನ್ನು ತಡೆಯಬಹುದು.
5. ಪ್ರತಿ ದಿನ ರಾಗಿ ತಿಂದರೆ ಅದರಲ್ಲಿರುವ ಅಮೀನೊ ಏಸಿಡ್ ಟ್ರೈಪ್ಟೋಫನ್ ಹಸಿವನ್ನು ಕಡಿಮೆ ಮಾಡುತ್ತದೆ.
ಇದರಲ್ಲಿರುವ ಮೆಗ್ನೀಷಿಯಂ ಅಂಶ ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡಿ, ಹೃದಯಾಘಾತ ಸಮಸ್ಯೆ ನಿವಾರಿಸುತ್ತದೆ. ರಾಗಿ ಆಹಾರ ಸೇವಿಸಿದರೆ ಮನಸ್ಸು ರಿಲ್ಯಾಕ್ಸ್ ಆಗುತ್ತದೆ ಹಾಗೂ ನೆಮ್ಮದಿ ಸಿಗುತ್ತದೆ. ರಾಗಿಯನ್ನು ಸೇವಿಸುವ ಜನರಲ್ಲಿ ಶೇ.30ರಷ್ಟು ಮಧುಮೇಹ ಇಳಿಕೆ ಕಂಡುಬರುತ್ತದೆ.
ವರದಿಗಾರರು: ರವಿಕುಮಾರ ಮುರಾಳ ಬಾಗಲಕೋಟ

About the author

ಕನ್ನಡ ಟುಡೆ

Leave a Comment