ರಾಷ್ಟ್ರ ಸುದ್ದಿ

ಸಕ್ರಿಯ ರಾಜಕಾರಣಕ್ಕೆ ಪ್ರಿಯಾಂಕಾ ಗಾಂಧಿ ವಾದ್ರಾ, ಉತ್ತರ ಪ್ರದೇಶ ಪೂರ್ವ ವಿಭಾಗ ಪ್ರಧಾನ ಕಾರ್ಯದರ್ಶಿಯಾಗಿ ನೇಮಕ

ವದೆಹಲಿ: ಲೋಕಸಭೆ ಚುನಾವಣೆ ಘೊಷಣೆಯಾಗುವುದಕ್ಕೆ ಮುನ್ನ ಕಾಂಗ್ರೆಸ್ ಪಕ್ಷದ ವರಿಷ್ಠರು ಅತ್ಯಂತ ಪ್ರಮುಖ ನಿರ್ಧಾರವೊಂದನ್ನು ತಾಳಿದ್ದಾರೆ. ಉತ್ತರ ಪ್ರದೇಶ ಪೂರ್ವ ವಿಭಾಗಕ್ಕೆ ಪ್ರಿಯಾಂಕಾ ಗಾಂಧಿ ವಾದ್ರಾ ಅವರನ್ನು ಕಾಂಗ್ರೆಸ್ ನ ಪ್ರಧಾನ ಉಸ್ತುವಾರಿ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಲಾಗಿದೆ.
ಇದರೊಡನೆ ಪ್ರಿಯಾಂಕಾಗೆ ಇದೇ ಮೊದಲ ಬಾರಿಗೆ ಪಕ್ಷದಲ್ಲಿ ಅಧಿಕೃತ ಹುದ್ದೆಯೊಂದನ್ನು ನೀಡಲಾಗಿದೆ. ಪೂರ್ವ ವಿಭಾಗದ ಉಸ್ತುವಾರಿ ನೋಡಿಕೊಳ್ಳುವ ಹೊಣೆ ಹೊತ್ತ ಪ್ರಿಯಾಂಕಾ ಪ್ರಧಾನಿ ಮೋದಿ ಕ್ಷೇತ್ರವಾದ ವಾರಣಾಸಿಯಲ್ಲಿ ಸಹ ಪ್ರಚಾರ ಕಾರ್ಯ ನಡೆಸಲಿದ್ದಾರೆ.
ಕೆಸಿ ವೇಣುಗೋಪಾಲ್ ಅವರನ್ನು ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿದೆ. ಇದಲ್ಲದೆ ಜೋತಿರಾದಿತ್ಯ ಸಿಂಧಿಯಾ ಅವರನ್ನು ಉತ್ತರ ಪ್ರದೇಶ ಪಶ್ಚಿಮ ವಿಭಾಗದ ಕಾಂಗ್ರೆಸ್ ಪ್ರಧಾನ ಉಸ್ತುವಾರಿ ಕಾರ್ಯದರ್ಶಯನ್ನಾಗಿಯೂ ಗುಲಾಂ ನಬಿ ಆಜಾದ್ ಅವರನ್ನು ಹರಿಯಾಣದ ಉಸ್ತುವಾರಿಯನ್ನಾಗಿಯೂ ನೇಮಕ ಮಾಡಲಾಗಿದೆ.

About the author

ಕನ್ನಡ ಟುಡೆ

Leave a Comment