ರಾಜಕೀಯ ಸುದ್ದಿ

ಸಕ್ರಿಯ ರಾಜಕಾರಣಕ್ಕೆ ಬಿಜೆಪಿ ನಾಯಕ ಎಸ್​​ ಎಂ ಕೃಷ್ಣ ಗುಡ್​ ಬೈ? ಮಗಳು ಶಾಂಭವಿ ‘ಪಾಲಿಟಿಕ್ಸ್’​ಗೆ ಸದ್ಯದಲ್ಲೇ ಎಂಟ್ರೀ..!

ಬೆಂಗಳೂರು: ಒಂದೆಡೆ ವರ್ಷದ ಹಿಂದೆ ಕಾಂಗ್ರೆಸ್​ ತೊರೆದು ಬಿಜೆಪಿ ಪಕ್ಷಕ್ಕೆ ಸೇರಿದ್ದ ಮಾಜಿ ಮುಖ್ಯಮಂತ್ರಿ, ಹಿರಿಯ ಬಿಜೆಪಿ ನಾಯಕ ಎಸ್.ಎಂ.ಕೃಷ್ಣ ಅವರು ಸಕ್ರಿಯ ರಾಜಕಾರಣದಿಂದ ನಿವೃತ್ತಿ ಹೊಂದಲಿದ್ದಾರೆ? ಎನ್ನಲಾಗುತ್ತಿದೆ. ಇನ್ನೊಂದಡೆ ಎಸ್​.​ಎಂ ಕೃಷ್ಣಾ ಅವರು ರಾಜಕೀಯವಾಗಿ ಮೂಲೆಗುಂಪಾಗಲು ಬಿಜೆಪಿ ನಾಯಕರೇ ಕಾರಣ ಎಂಬ ಚರ್ಚೆ ನಡೆಯುತ್ತಿದೆ.

ಐದು ದಶಕಕ್ಕೂ ಹೆಚ್ಚು ಕಾಲ ಕಾಂಗ್ರೆಸ್ ಪಕ್ಷದಲ್ಲಿದ್ದ ಮಾಜಿ ಕೇಂದ್ರ ಸಚಿವ ಎಸ್​ ಎಂ ಕೃಷ್ಣ ಅವರು ಮುಖ್ಯಮಂತ್ರಿಯಾಗಿ, ವಿದೇಶಾಂಗ ಸಚಿವರಾಗಿ, ರಾಜ್ಯಪಾಲರಾಗಿ ಸೇವೆ ಸಲ್ಲಿಸಿದ್ದಾರೆ. ಕಳೆದ ವರ್ಷ 2017ರ ಮಾರ್ಚ್‌ನಲ್ಲಿ ಅವರು ಕಾಂಗ್ರೆಸ್‌ ಪಕ್ಷ ತೊರೆದು ಬಿಜೆಪಿ ಸೇರಿದ್ದರು. ಆದರೆ ದಿನ ಕಳೆಯುತ್ತಿದ್ದಂತೆ ಬಿಜೆಪಿ ನಾಯಕರು ಹಿರಿ ವಯಸ್ಸಿನ ಕೃಷ್ಣ ಅವರನ್ನು ಕಡೆಗಣಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಎಸ್​ ಎಂ ಕೃಷ್ಣ ಅವರು ಸಕ್ರಿಯ ರಾಜಕಾರಣದಿಂದ ದೂರ ಉಳಿಯುತ್ತಿದ್ದಾರೆ ಎಂಬ ಚರ್ಚೆ ನಡೆಯುತ್ತಿದ್ದಂತೆ ರಾಜಕೀಯದಲ್ಲಿ ಹಲವು ಪ್ರಶ್ನೆಗಳು ಹುಟ್ಟಿಕೊಂಡಿವೆ. ಆದರೆ, ಹಿರಿಯ ನಾಯಕನ ಮುಂದಿನ ನಡೆಯೇನು? ಎಂಬುದರ ಬಗ್ಗೆ ಕನ್ನಡ ಟುಡೆ ಡಿಜಿಟಲ್ ನ್ಯೂಸ್​​ ಎಕ್ಸ್​​ಕ್ಲೂಸಿವ್​​​ ಮಾಹಿತಿ ಲಭ್ಯವಾಗಿದೆ. ಅವರ ರಾಜಕೀಯ ಮುಂದಿನ ಹೆಜ್ಜೆಗಳು ಹೇಗೆ ಇರಲಿವೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ..

ಈ ಕುರಿತು ಭಾರೀ ಗಂಭೀರವಾಗಿ ಚಿಂತಿಸಿರುವ ಎಸ್​ ಎಂ ಕೃಷ್ಣ ಅವರು, ತಮ್ಮ ಮಗಳು
ಶಾಂಭವಿ ಅವರನ್ನು ರಾಜಕರಣಕ್ಕೆ ತರುವ ಎಲ್ಲಾ ಸಾಧ್ಯತೆಗಳಿವೆ. ಎರಡನೇ ಮಗಳು ಶಾಂಭವಿ ಅವರನ್ನು ಸಕ್ರಿಯ ರಾಜಕರಣಕ್ಕೆ ಕರೆತರುವ ಬಗ್ಗೆ ಎಸ್​.ಎಂ ಕೃಷ್ಣಾ ಅವರು ಆಸಕ್ತಿ ಹೊಂದಿದ್ಧಾರೆ. ಸದ್ಯದಲ್ಲೇ ಎಲ್ಲವೂ ಗೊತ್ತಾಗಲಿದೆ ಎಂದು ಎಸ್​ಎಂಕೆ ಕುಟುಂಬದಿಂದ ಮಾಹಿತಿ ಲಭ್ಯವಾಗಿದೆ.

ಇನ್ನು ಎಸ್​ ಎಂ ಕೃಷ್ಣ ಅವರ ಕೆಲವು ಆಪ್ತರು ಮಂಡ್ಯದಿಂದ ಬಿಜೆಪಿ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಿ ಮೋದಿ ವರ್ಚಸ್ಸಿನಿಂದಲೇ ಗೆಲ್ಲಿಸಿ ಎಂದು ಸಲಹೆ ನೀಡಿದ್ದಾರೆ. ಮತ್ತು ಹಲವರು ಕಾಂಗ್ರೆಸ್​​ ಅಥವಾ ಜೆಡಿಎಸ್​ನಿಂದ ಕಣಕ್ಕಿಳಿಸಿ ಲೋಕಸಭಾ ಚುನಾವಣೆಯಲ್ಲಿ ಸುಲಭವಾಗಿ ಮಂಡ್ಯದಿಂದಲೇ ಗೆಲ್ಲಿಸಬಹುದು ಎಂದು ಒತ್ತಾಯಿಸಿದ್ದಾರೆ ಎನ್ನಲಾಗಿದೆ. ಒಟ್ನಲ್ಲಿ ಶಾಂಭವಿಯನ್ನು ಆಪ್ತರ ಒತ್ತಡಕ್ಕೆ ಮಣಿದು ಸಕ್ರಿಯ ರಾಜಕಾರಣಕ್ಕೆ ಕರೆತರುತ್ತಾರ, ಇಲ್ಲವೇ ಎಂಬುದು ಎಸ್​​ಎಂಕೆ ಅವರಿಗೆ ಬಿಟ್ಟ ವಿಚಾರ.

 

About the author

ಕನ್ನಡ ಟುಡೆ

Leave a Comment