ಕ್ರೀಡೆ

ಸಚಿನ್​ ತೆಂಡೂಲ್ಕರ್ ಅವರಿಗೆ​ ಯಾಕಿಲ್ಲ ‘ಐಸಿಸಿ ಹಾಲ್ ಆಫ್ ಫೇಮ್’ ಗೌರವ

ಇತ್ತೀಚೆಗಷ್ಟೇ ವಿಶ್ವ ಶ್ರೇಷ್ಠ ಕ್ರಿಕೆಟಿಗ, ಭಾರತದ ವಾಲ್​​​ ಖ್ಯಾತಿಯ ರಾಹುಲ್​ ದ್ರಾವಿಡ್ ಅವರು ಐಸಿಸಿ ಹಾಲ್​ ಆಫ್​ ಫೇಮ್​ ಗೌರವಕ್ಕೆ ಪಾತ್ರರಾದರು. ಕಪಿಲ್ ದೇವ್, ಸುನಿಲ್ ಗವಾಸ್ಕರ್, ಬಿಷನ್ ಸಿಂಗ್ ಬೇಡಿ ಹಾಗೂ ಅನಿಲ್ ಕುಂಬ್ಳೆ ಬಳಿಕ ರಾಹುಲ್​ ಈ ಪ್ರಶಸ್ತಿ ಪಡೆದ 5ನೇ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಈ ಮಧ್ಯೆ ಕ್ರಿಕೆಟ್​ ದೇವರು ಸಚಿನ್​ ತೆಂಡೂಲ್ಕರ್ ಅವರಿಗೆ​ ಸಿಗದೆ ಈ ಗೌರವ ದ್ರಾವಿಡ್​​ಗೆ ಮೊದಲು ಹೇಗೆ ಸಿಕ್ಕಿತು ಎಂಬ ಮಾತುಗಳು ಕೇಳಿಬರುತ್ತಿವೆ. ಜೊತೆಗೆ ಸಚಿನ್​​ ಈ ಗೌರವ ಪಡೆಯಲು ಅರ್ಹರಾಗಿಲ್ಲವ ಎಂಬ ಪ್ರಶ್ನೆ ಕೂಡ ಎದ್ದಿದೆ. ದ್ರಾವಿಡ್ ಹಾಗೂ ಸಚಿನ್ ತೆಂಡೂಲ್ಕರ್ ಸಮಕಾಲೀನ ಕ್ರಿಕೆಟಿಗರು. ಇಷ್ಟಾದರೂ ಸಚಿನ್ ಬಿಟ್ಟು ದ್ರಾವಿಡ್‌ಗೆ ಈ ಪ್ರಶಸ್ತಿ ಯಾಕೆ ಸಿಕ್ಕಿತು ಎಂಬುದಕ್ಕೆ ಇಲ್ಲಿದೆ ಉತ್ತರ.

‘ಹಾಲ್ ಆಫ್ ಫೇಮ್’ ಗೌರವಕ್ಕೆ ಆಯ್ಕೆಯಾಗಲು ಪ್ರಮುಖ 2 ನಿಯಮಗಳಿವೆ. ಒಂದು ಅಂತಾರಾಷ್ಟ್ರೀಯ ಕ್ರಿಕೆಟ್‌ನ ಯಾವುದೇ ಎರಡು ಮಾದರಿಯಲ್ಲಿ 8 ಸಾವಿರ ರನ್ ಹಾಗೂ ಕನಿಷ್ಠ 20 ಶತಕ ಸಿಡಿಸಿರಬೇಕು. ಆದರೆ ಸಚಿನ್ ಅವರು ಏಕದಿನದಲ್ಲಿ 18,426 ರನ್ ಹಾಗೂ ಟೆಸ್ಟ್ ಕ್ರಿಕೆಟ್‌ನಲ್ಲಿ 15,921 ರನ್ ಕಲೆಹಾಕಿದ್ದಾರೆ. ಇನ್ನು ಎರಡು ಮಾದರಿಯಿಂದ 100 ಶತಕ ಕೂಡ ಬಾರಿಸಿದ್ದಾರೆ. ಹೀಗಾಗಿ ಮೊದಲ ನಿಯಮದಲ್ಲಿ ಸಚಿನ್​ಗೆ ಯಾವುದೇ ಅಡೆತಡೆಯಿಲ್ಲ.

ಆದರೆ ಎರಡನೇ ನಿಯಮ ಮಾತ್ರ ಮಾಸ್ಟರ್ ಬ್ಲಾಸ್ಟರ್​ಗೆ ಹಿನ್ನೆಡೆಯುಂಟುಮಾಡಿದೆ. ನಿಯಮದ ಪ್ರಕಾರ ಹಾಲ್ ಆಫ್ ಗೌರವಕ್ಕೆ ಪಾತ್ರರಾಗಬೇಕಾದರೆ, ಅವರು ಕ್ರಿಕೆಟ್‌ನಿಂದ ನಿವೃತ್ತಿ ಹೇಳಿ 5 ವರ್ಷಗಳು ಕಳೆದಿರಬೇಕು. ಆದರೆ ಸಚಿನ್ ತೆಂಡೂಲ್ಕರ್ 2013ರಲ್ಲಿ ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತಿಯಾಗುವ ಮೂಲಕ ಎಲ್ಲಾ ಮಾದರಿ ಕ್ರಿಕೆಟ್‌ಗೆ ವಿದಾಯ ಹೇಳಿದರು. ಇನ್ನೂ 5 ವರ್ಷ ಪೂರೈಸಿಲ್ಲ. ಹೀಗಾಗಿ ಸಚಿನ್​ಗೆ ಇನ್ನೂ ಈ ಗೌರವ ದಕ್ಕಿಲ್ಲ. ಸಚಿನ್ ಅವರು ಮುಂದಿನ ವರ್ಷದಿಂದ ಹಾಲ್ ಆಫ್ ಫೇಮ್ ಗೌರವಕ್ಕೆ ಅರ್ಹರಾಗಲಿದ್ದಾರೆ.

About the author

ಕನ್ನಡ ಟುಡೆ

Leave a Comment