ರಾಜಕೀಯ

ಸಚಿವ ಸ್ಥಾನದಿಂದ ಕೆಳಗಿಳಿಸಿದಾಗಲೇ ನನ್ನ ಯೋಗ್ಯತೆ ಗೊತ್ತಾಯ್ತು: ಅಂಬರೀಷ್

ಬೆಂಗಳೂರು: ನಮ್ಮ ಪಕ್ಷದ ನಾಯಕರು ನನಗಾಗಿ ಬಿ ಫಾರಂ ಇಟ್ಟುಕೊಂಡಿದ್ದರು. ಆದರೆ ನನಗೂ ವಯಸ್ಸಾಗುತ್ತಿದೆ. ಜತೆಗೆ ನನ್ನ ಆಸಕ್ತಿ ಮತ್ತು ಶಕ್ತಿ ಎಲ್ಲವೂ ಕುಗ್ಗುತ್ತಿದೆ. ಹೀಗಾಗಿ ನನಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಸಾಧ್ಯವಿಲ್ಲ ಎಂದು ಶಾಸಕ ಅಂಬರೀಷ್​ ಅವರು ಸ್ಪಷ್ಟಪಡಿಸಿದ್ದಾರೆ. ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿದ ಅಂಬರೀಷ್​ ಅವರು ಈ ಬಾರಿ ನಾನು ಗೆದ್ದರೂ ನನ್ನನ್ನು ಮಂತ್ರಿ ಮಾಡುವುದಿಲ್ಲ. ಈ ಹಿಂದೆ ನನ್ನನ್ನು ಸಚಿವ ಸ್ಥಾನದಿಂದ ಕೆಳಗಿಳಿಸಿದಾಗಲೇ ನನ್ನ ಯೋಗ್ಯತೆ ಏನು ಎಂದು ತಿಳಿದು ಕೊಂಡಿದ್ದೆ. ಕೇವಲ ಶಾಸಕನಾಗಲು ನಾನು ಚುನಾವಣೆಯಲ್ಲಿ ಸ್ಪರ್ಧಿಸಲು ಸಾಧ್ಯವಿಲ್ಲ ಎಂದು ಹೇಳಿದರು.

ಆಪ್ತರಿಗೆ ಟಿಕೆಟ್ ನೀಡಿ ಎಂದು ಕೇಳಿಲ್ಲಾವ.?

ನನ್ನ ಆಪ್ತರಿಗೆ ಟಿಕೆಟ್​ ನೀಡಲು ತಿಳಿಸಿದರೂ ನಾನೇ ಅವರನ್ನು ಗೆಲ್ಲಿಸಬೇಕು. ನನಗೆ ವೋಟು ಕೇಳುವುದಕ್ಕೂ ಬೇರೆಯವರಿಗಾಗಿ ವೋಟು ಕೇಳುವುದಕ್ಕೂ ವ್ಯತ್ಯಾಸವಿದೆ. ಅದರ ಬದಲು ನಾನೇ ಹೋಗಿ ಸ್ಪರ್ಧಿಸಬಹುದು. ಹಾಗಾಗಿ ನಾನು ಯಾರಿಗೂ ಟಿಕೆಟ್​ ನೀಡಿ ಎಂದು ತಿಳಿಸಿಲ್ಲ. ನಾನು ಯಾರ ಪರವಾಗಿಯೂ ಪ್ರಚಾರಕ್ಕೆ ಹೋಗುವುದಿಲ್ಲ ಎಂದು ಅಂಬರೀಷ್​ ತಿಳಿಸಿದರು.

 

About the author

ಕನ್ನಡ ಟುಡೆ

Leave a Comment