ಸಾಂಸ್ಕ್ರತಿಕ

ಸತತ ಬರಗಾಲದಿಂದ – ಸಿಂಧು ನಾಗರಿಕತೆ ನಾಶ

ಒಂಬೈನೂರು ವರ್ಷಗಳ ಸತತ ಬರಗಾಲದಿಂದಾಗಿ ಸಿಂಧೂಕಣಿವೆ ನಾಗರಿಕತೆ 4,500 ವರ್ಷಗಳ ಹಿಂದೆ ನಶಿಸಿಹೋಯಿತು ಎಂದು ಖರಗ್ಪುರ ಐಐಟಿ ವಿಜ್ಞಾನಿಗಳ ತಂಡದ ಸಂಶೋಧನೆ ತಿಳಿಸಿದೆ. ಅಧ್ಯಯನದ ವೇಳೆ ಸಂಗ್ರಹಿಸಲಾದ ಸಾಕ್ಷ್ಯಾಧಾರಗಳು ಈಹಿಂದಿನ ನಂಬಿಕೆಯನ್ನು ಪುಷ್ಟಿಗೊಳಿಸಿವೆ. ಅಧ್ಯಯನದ ವಿವರಗಳು ಪ್ರತಿಷ್ಠಿತ ಅಂತಾರಾಷ್ಟ್ರೀಯ ಪತ್ರಿಕೆ ಕ್ವಾಟೆರ್ನರಿ ಇಂಟರ್ನ್ಯಾಷನಲ್ಜರ್ನಲ್ನಲ್ಲಿ ತಿಂಗಳು ಪ್ರಕಟವಾಗಲಿವೆ. ಭೂವಿಜ್ಞಾನ ಮತ್ತು ಭೂಭೌತವಿಜ್ಞಾನಗಳ ವಿಭಾಗದ ಸಂಶೋಧಕರು ಕಳೆದ 5,000 ವರ್ಷಗಳ ಮಾನ್ಸೂನ್ ಏರಿಳಿತಗಳ ಅಧ್ಯಯನ ನಡೆಸುತ್ತಿದ್ದು, ವಾಯವ್ಯ ಹಿಮಾಲಯದ ಪ್ರದೇಶಗಳಲ್ಲಿ ಸತತ 900 ವರ್ಷಗಳಕಾಲ ಭೀಕರ ಬರಗಾಲ ಉಂಟಾಗಿರುವುದನ್ನು ಪತ್ತೆಹಚ್ಚಿದ್ದಾರೆ. ಇದರಿಂದಾಗಿ ನಾಗರಿಕತೆಯ ಬೆಳವಣಿಗೆಗೆ ಕಾರಣವಾಗಿದ್ದ ನದಿಗಳೆಲ್ಲ ಬತ್ತಿಹೋದವು. ಕ್ರಮೇಣ ಅಲ್ಲಿವಾಸಿಸುತ್ತಿದ್ದ ಜನರೆಲ್ಲ ಳೆ ಚೆನ್ನಾಗಿ ಬೀಳುತ್ತಿದ್ದ ಪೂರ್ವಮತ್ತು ದಕ್ಷಿಣದ ಕಡೆಗೆ ವಲಸೆ ಹೋದರು ಎಂದು ಅಧ್ಯಯನ ತಿಳಿಸಿದೆ.

About the author

ಕನ್ನಡ ಟುಡೆ

Leave a Comment