ಕ್ರೀಡೆ

ಸತತ 4 ಪಂದ್ಯ ಸೋಲಿನ ಬಳಿಕ ಆರ್‌ಸಿಬಿ ತಂಡದಲ್ಲಿ ಮತ್ತಷ್ಟು ಬದಲಾವಣೆಗೆ ಮುಂದಾದ ಕೊಹ್ಲಿ

ಜೈಪುರ: ಈ ಸಲ ಕಪ್ ನಮ್ದೆ ಅಂತಾ ಹೇಳುತ್ತಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅಭಿಮಾನಿಗಳಿಗೆ ತೀವ್ರ ನಿರಾಸೆಯಾಗಿದ್ದು ತಂಡ ಸತತ ನಾಲ್ಕು ಪಂದ್ಯಗಳಲ್ಲಿ ಸೋಲು ಕಂಡಿದೆ ಇದಕ್ಕೆ ತಂಡದಲ್ಲಿ ಕೆಲ ಬದಲಾವಣೆಗೆ ಆರ್‌ಸಿಬಿ ನಾಯಕ ವಿರಾಟ್ ಕೊಹ್ಲಿ ಮುಂದಾಗಿದ್ದಾರೆ. ರಾಜಸ್ತಾನ ರಾಯಲ್ಸ್ ವಿರುದ್ಧದ ನಾಲ್ಕನೇ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಆರಂಭಿಕರಾಗಿ ಕಣಕ್ಕಿಳಿದೂ ಕೆಲ ಬದಲಾವಣೆಗಳನ್ನು ಮಾಡಿದರೂ 7 ವಿಕೆಟ್ ಗಳಿಂದ ಸೋಲು ಕಾಣಬೇಕಾಯಿತು. ಇದರಿಂದಾಗಿ ಮತ್ತೆ ತಂಡದಲ್ಲಿ ಕೆಲ ಬದಲಾವಣೆಗೆ ಕೊಹ್ಲಿ ಮುಂದಾಗಿದ್ದಾರೆ. 160 ರನ್ ಪೇರಿಸಿದರೆ ಸಾಕು ಸ್ಪರ್ಧೆ ನೀಡಬಹುದು ಎಂದು ಅಂದುಕೊಂಡಿದ್ದೇವು. ಆದರೆ ನಮಗೆ ಇನ್ನು ಹೆಚ್ಚಾಗಿ 15-20 ರನ್ ಬೇಕಿತ್ತು. ಆಗ ಎದುರಾಳಿಗೆ ಗೆಲುವು ಕಷ್ಟವಾಗುತ್ತಿತ್ತು ಎಂದು ಹೇಳಿದ್ದಾರೆ. ನಮ್ಮ ತಂಡದಲ್ಲಿ ಕಳಪೆ ಫೀಲ್ಡ್  ಹೆಚ್ಚಾಗಿ ಆಗುತ್ತಿದ್ದು ಇದು ನಮ್ಮನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ಅಜಿಂಕ್ಯ ರಹಾನೆ ಮತ್ತು ಸ್ಟೀವ್ ಸ್ಮಿತ್ ಕ್ಯಾಚ್ ಗಳನ್ನು ಬಿಟ್ಟಿದ್ದು ನಮಗೆ ದುಬಾರಿಯಾಯಿತು ಎಂದಿದ್ದಾರೆ.

About the author

ಕನ್ನಡ ಟುಡೆ

Leave a Comment