ರಾಜ್ಯ ಸುದ್ದಿ

ಸದನಕ್ಕೆ ಬರುವಾಗ ಸರಿಯಾಗಿ ಶರ್ಟ್​ ಗುಂಡಿ ಹಾಕಿ: ನೂತನ ಶಾಸಕರಿಗೆ ಸ್ಪೀಕರ್​ ಕ್ಲಾಸ್​

ಬೆಂಗಳೂರು: ಬಯಸಿದವರೆಲ್ಲ ವಿಧಾನಸೌಧಕ್ಕೆ ಬರಲು ಆಗುವುದಿಲ್ಲ. 6 ಕೋಟಿ ಕನ್ನಡಿಗರಲ್ಲಿ 224 ಸದಸ್ಯರು ಮಾತ್ರ ಬರಬಹುದು. ಹಾಗಾಗಿ ಸದನಕ್ಕೆ ಬರುವಾಗ ಸದಸ್ಯರ ಡ್ರೆಸ್ ಕೋಡ್ ಸರಿ ಇರಲಿ ಎಂದು ಸ್ಪೀಕರ್​ ರಮೇಶ್​ ಕುಮಾರ್​ ನೂತನ ಶಾಸಕರಿಗೆ ಕ್ಲಾಸ್​ ತೆಗೆದುಕೊಂಡಿದ್ದಾರೆ.

ಡ್ರೆಸ್​ ಕೋಡ್​ ಎಂದರೆ ಸೂಟು ಬೂಟು ಕಾಕಿಕೊಂಡು ಬರಬೇಕೆಂದಲ್ಲ. ಶರ್ಟ್​ಗಳ ಗುಂಡಿ ಹಾಕಿಕೊಂಡು ಬರಬೇಕು ಎಂದು ಶಾಸಕರಿಗೆ ಶಿಸ್ತಿನ ಪಾಠ ಮಾಡಿದ್ದಾರೆ, ಮೊದಲ ಬಾರಿಗೆ 61 ಶಾಸಕರು ಆಯ್ಕೆಯಾಗಿದ್ದು, ವಿಧಾನ ಪರಿಷತ್‌ನ 17 ಸದಸ್ಯರು ಸೇರಿ ಒಟ್ಟು 78 ಶಾಸಕರಿಗೆ ವಿಧಾನಸಭೆ, ಪರಿಷತ್‌ ನಡಾವಳಿಗಳ ಬಗ್ಗೆ ಹಿರಿಯ ಶಾಸಕರೂ ಆದ ಸ್ಪೀಕರ್ ಪಾಠ ಮಾಡಿದರು. ಆದರೆ, ಈ ಕಾರ್ಯಾಗಾರಕ್ಕೂ ಕೆಲ ನೂತನ ಶಾಸಕರು ಗೈರಾಗಿದ್ದಾರೆ. 

About the author

ಕನ್ನಡ ಟುಡೆ

Leave a Comment