ಸಿನಿ ಸಮಾಚಾರ

ಸನ್ನಿ ಮಡಿಲು ತುಂಬಿದ ಅವಳಿ ಮಕ್ಕಳು

ಬಾಂಬೆ: ಬಾಲಿವುಡ್‌ ನಟಿ ಸನ್ನಿ ಲಿಯೋನ್‌ ಹಾಗೂ ಅವರ ಪತಿ ಡೇನಿಯಲ್‌ ವೆಬರ್‌ ಬಾಳಿಗೆ ಸದಸ್ಯರಿಬ್ಬರು ಆಗಮಿಸಿದ್ದು. ಅವರ ಸಂತೋಷ ದುಪ್ಪಟ್ಟಾಗಿದೆ. ಕಳೆದ ವರ್ಷ ನಿಶಾ ಕೌರ್‌ ವೆಬರ್‌ ಅನ್ನು ಸನ್ನಿ ದಂಪತಿ ದತ್ತು ಪುತ್ರಿಯಾಗಿ ಸ್ವೀಕರಿಸಿದರು. ಇದೀಗ ಅವಳಿ ಗಂಡು ಮಕ್ಕಳು ಅವರ ಮಡಿಲು ತುಂಬಿದ್ದಾರೆ. ಮಕ್ಕಳಿಗೆ ಇಶಾರ್‌ ಮತ್ತು ನೋಹ್ ಎಂದು ಹೆಸರಿಟ್ಟಿದ್ದಾರೆ.

ಇದು ದೇವರ ನಿಶ್ಚಯ ನಮ್ಮ ಕುಟುಂಬ ಹೀಗಾಗುತ್ತದೆ ಎಂದು ಭಾವಿಸಿರಲಿಲ್ಲ. ನಮ್ಮ ಜೀವನದಲ್ಲಿ 3 ವಿಸ್ಮಯ ನಡೆದಂತಿದೆ. ಇದೀಗ ನಮ್ಮ ಕುಟುಂಬ ದೊಡ್ಡದಾಗಿದೆ ಎಂದು ಸನ್ನಿ ಟ್ವೀಟ್‌ ಮಾಡಿದ್ದಾರೆ. ಸನ್ನಿ ದಂಪತಿ ಬಾಡಿಗೆ ತಾಯಿ ಮೂಲಕ ಅವಳಿ ಮಕ್ಕಳನ್ನು ಪಡೆದಿದ್ದಾರೆ. ನನ್ನಅಂಡಾಣು ಹಾಗೂ ಡೇನಿಯಲ್ ವೀರ್ಯಾಣು ಮೂಲಕ ಜನಿಸಿದ ಮಕ್ಕಳಿವರು. ಆದರೆ ಈ ಮಕ್ಕಳನ್ನು ಹೆತ್ತು ಕೊಡಲು ಒಬ್ಬ ದೇವತೆಯನ್ನು ದೇವರು ಕಳುಹಿಸಿಕೊಟ್ಟರು’ ಎಂದು ಸಂತೋಷ ವ್ಯಕ್ತಪಡಿಸಿದ್ದಾರೆ.

ನಮ್ಮ ಬದುಕಿನ ಹೊಸ ಅಧ್ಯಾಯ ಪ್ರಾರಂಭವಾಗಿದೆ. “ನಮ್ಮ ಜೀವನದ ಅದ್ಭುತ ಪಯಣವಾಗಿದೆ ಮುಂದೆ ಎಲ್ಲವೂ ಒಳ್ಳೆಯದೇ ಆಗಲಿ ಎಂದು ಬಯಸುತ್ತೇನೆ” ಎಂದು ಹೇಳಿದ್ದಾರೆ.

 

About the author

ಕನ್ನಡ ಟುಡೆ

Leave a Comment