ರಾಜ್ಯ ಸುದ್ದಿ

ಸಪ್ತಪದಿ ತುಳಿದ ಬಳಿಕ ಸುಮಲತಾ ಅಂಬರೀಶ್‌ಗೆ ಮತ ನೀಡಿ ಎಂದ ನವ ವಧು ವರ

ರಾಮನಗರ: ಮಂಡ್ಯ ಲೋಕಸಭೆ ಚುನಾವಣೆ ಕಾವು ರಾಮನಗರಕ್ಕೂ ಹಬ್ಬಿದ್ದು ಸಪ್ತಪದಿ ತುಳಿದ ಬಳಿಕ ನವ ವಧು-ವರರು ಸುಮಲತಾ ಅಂಬರೀಶ್ ಪರ ಮತಯಾಚನೆ ಮಾಡಿದ್ದು ಈ ವಿಡಿಯೋ ಇದೀಗ ವೈರಲ್ ಆಗಿದೆ. ವರ ನಾಗರಾಜ್ ಹಾಗೂ ವಧು ರೇಷ್ಮಾ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು ಮಂಡ್ಯ ಪಕ್ಷೇತ್ತರ ಅಭ್ಯರ್ಥಿ ಸುಮಲತಾ ಅವರ ಪರ ಮತಯಾಚಿಸಿದರು. ಕಳೆದ ಶನಿವಾರ ನಾಗರಾಜ್ ಹಾಗೂ ರೇಷ್ಮಾ ರಾಮನಗರ ತಾಲೂಕಿನ ಬಿಡದಿಯ ಎಸ್ ಪಿ ಕಲ್ಯಾಣ ಮಂಟಪದಲ್ಲಿ ಮದುವೆಯಾಗಿದ್ದು ಬಳಿಕ ವೋಟ್ ಫಾರ್ ಸುಲಮತಾ ಎಂದು ಮತಯಾಚಿಸಿದ್ದಾರೆ.

About the author

ಕನ್ನಡ ಟುಡೆ

Leave a Comment