ಸುದ್ದಿ

ಸಪ್ತಪದಿ ತುಳಿಯುತ್ತಿದ್ದ ವಧು ಮೇಲೆ ಹಲ್ಲೆ ನಡೆಸಿದ ಪ್ರೇಮಿ

ಶಿವಮೊಗ್ಗ: ಭೀಮನಕೋಣೆ ಕಾಪ್ಟೆಮನೆಯಲ್ಲಿ ಸಪ್ತಪದಿ ತುಳಿಯುತ್ತಿದ್ದಾಗಲೇ ಮದುಮಗಳ ಮೇಲೆ ಕತ್ತಿಯಿಂದ ಹಲ್ಲೆ ನಡೆದಿದೆ. ವಧುವಿನ ಪ್ರಿಯಕರ ಈ ಕೃತ್ಯ ಎಸಗಿದ್ದಾನೆ.

ವರ ಭರತ್‌ ಎಂಬವರ ಸ್ವಗೃಹದಲ್ಲಿ ಮದುವೆ ನಡೆಯುತ್ತಿತ್ತು. ತಾಳಿ ಕಟ್ಟಿದ ನಂತರ ಸಪ್ತಪದಿ ತುಳಿಯುತ್ತಿದ್ದಾಗ ಅಲ್ಲೇ ಇದ್ದ ಭಗ್ನ ಪ್ರೇಮಿ ವಧುವಿನ ಕುತ್ತಿಗೆಗೆ ಚಾಕುವಿನಿಂದ ಇರಿದಿದ್ದಾನೆ.

ತಪ್ಪಿಸಲು ಬಂದ ವಧುವಿನ ಚಿಕ್ಕಪ್ಪ ಗಂಗಾಧರಪ್ಪ ಎಂಬವರ ಮೇಲೂ ಆರೋಪಿ ಹಲ್ಲೆ ಮಾಡಿದ್ದಾನೆ.ಹಲ್ಲೆಗೊಳಗಾದ ವಧು ಹಾಗೂ ಗಂಗಾಧರಪ್ಪ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆರೋಪಿಯನ್ನು ಅಲ್ಲೇ ಇದ್ದ ಸಂಬಂಧಿಕರು ಪೊಲೀಸರಿಗೆ ಒಪ್ಪಿಸಿದ್ದಾರೆ.

About the author

ಕನ್ನಡ ಟುಡೆ

Leave a Comment