ದೇಶ ವಿದೇಶ

ಸಪ್ತ ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಚಾಲನೆ:

ಬೆಂಗಳೂರು,ಡಿ.19: ರಾಷ್ಟ್ರದಲ್ಲಿಯೇ ದೊಡ್ಡದಾದ ಸೂಕ್ಷ್ಮ ನೀರಾವರಿ ಪದ್ಧತಿ ಅಳವಡಿಕೆ ಯೋಜನೆ ರಾಜ್ಯದಲ್ಲಿ ಜಾರಿಗೆ ಬಂದಿದ್ದು, ಜನವರಿಯಲ್ಲಿ ಲೋಕಾರ್ಪಣೆಗೊಳ್ಳಲಿದೆ.  ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಮುಧೋಳ ಏತ ನೀರಾವರಿ ಯೋಜನೆಯ ಎರಡನೆ ಹಂತದಲ್ಲಿ 59.30 ಎಕರೆಗೆ ಹನಿ ನೀರಾವರಿ ಪದ್ಧತಿ ಯೋಜನೆ ಯಡಿ ಸೂಕ್ಷ್ಮ ನೀರಾವರಿ ಪದ್ಧತಿಯನ್ನು ಅಳವಡಿಸಲಾಗಿದೆ. ನೀರಿನ ಬಳಕೆ ಪ್ರಮಾಣ ಶೇ.80ರಷ್ಟು ಹೆಚ್ಚಾಗಿದ್ದರಿಂದ ನೀರಾವರಿ ಕ್ಷೇತ್ರ ದ್ವಿಗುಣವಾಗಲಿದೆ. 762 ಕೋಟಿ ರೂ. ವೆಚ್ಚದಲ್ಲಿ ಎರಡು ಪ್ಯಾಕೇಜ್‍ಗಳ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದೆ. ಇದುವರೆಗೂ ಒಟ್ಟು 935.65 ಕೋಟಿ ರೂ. ವೆಚ್ಚ ಮಾಡಲಾಗಿದೆ. ಈ ಸೂಕ್ಷ್ಮ ನೀರಾವರಿ ಯೋಜನೆಯಿಂದ ನೀರಿನ ಬಳಕೆಯಲ್ಲಿ ಮಿತವ್ಯಯ, ಸಾಮಥ್ರ್ಯ ಹೆಚ್ಚಳ, ರೈತರ ಆರ್ಥಿಕ ಗುಣಮಟ್ಟಕ್ಕೆ ಸಹಕಾರಿಯಾಗಲಿದೆ.

ಸಪ್ತ ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಚಾಲನೆ:ಬಿಜಾಪುರ ಜಿಲ್ಲೆಯ ಮಮದಾಪುರ, ಬೇಗಂತರಿ, ಭೂತನಾಳ, ಬಬಲೇಶ್ವರ, ಸಾರಾವಾಡ ಮತ್ತು ಗಿಡಗುಂಡಿ ಕೆರೆಗಳ ವ್ಯಾಪ್ತಿಯ ಗ್ರಾಮಗಳ ಕುಡಿಯುವ ನೀರಿನ ಬವಣೆ ನೀಗಿಸಲು ಶಾಶ್ವತ ಪರಿಹಾರಕ್ಕಾಗಿ ಕೃಷ್ಣಾ ನದಿಯಿಂದ ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಇದೇ 22ರಂದು ಚಾಲನೆ ನೀಡಲಾಗುತ್ತದೆ.
ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್ ಅವರ ಸತತ ಪ್ರಯತ್ನದಿಂದ ಈ ಯೋಜನೆ ಸಾಕಾರಗೊಂಡಿದ್ದು, ಸಪ್ತ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಜಾರಿಯಾಗಿದೆ.  2014ರ ನವೆಂಬರ್‍ನಲ್ಲಿ 196.97 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ಪ್ರಾರಂಭವಾಗಿತ್ತು. ಈ ಯೋಜನೆಗೆ ಶಂಕುಸ್ಥಾಪನೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ನೆರವೇರಿಸಿದ್ದರು.

About the author

ಕನ್ನಡ ಟುಡೆ

Leave a Comment