ರಾಷ್ಟ್ರ ಸುದ್ದಿ

ಸಮಾಜ ವಿಜ್ಞಾನ ಸಂಶೋಧನೆ ಉತ್ತೇಜನಕ್ಕೆ ಕೇಂದ್ರದಿಂದ 800 ಕೋಟಿ ರೂ. ನಿಗದಿ: ಪ್ರಕಾಶ್ ಜಾವ್ಡೇಕರ್

ನವದೆಹಲಿ:  ಉನ್ನತ ಶಿಕ್ಷಣದಲ್ಲಿ ಸಂಶೋಧನೆಯನ್ನು ಮತ್ತಷ್ಟು ಉತ್ತೇಜನಗೊಳಿಸುವ ನಿಟ್ಟಿನಲ್ಲಿ  ಕೇಂದ್ರ ಮಾನವ ಸಂಪನ್ಮೂಲ ಇಲಾಖೆ 800 ಕೋಟಿ ರು ಅನುದಾನ ನಿಗದಿ ಪಡಿಸಿದೆ ಎಂದು ಸಚಿವ ಪ್ರಕಾಶ್ ಜಾವ್ಡೇಕರ್ ಹೇಳಿದ್ದಾರೆ.
ಸಮಾಜ ವಿಜ್ಞಾನದಲ್ಲಿ ಪ್ರಬಲ ಸಂಶೋಧನಾ ನೀತಿ ಜಾರಿಗೆ ತರಲು 414 ಕೋಟಿ ರು ಹಣ ನಿಗದಿ ಪಡಿಸಿತ್ತು,ಯೋಜನೆ ಉತ್ತೇಜಿಸಲು 418 ಕೋಟಿ ಹಣ ಹೆಚ್ಚುವರಿಯಾಗಿ ನಿಗದಿ ಪಡಿಸಿದೆ. ಭಾರತೀಯ ಹಾಗೂ ವಿದೇಶಿ ಸಹಯೋಗದಲ್ಲಿ ಸಮಾಜ ವಿಜ್ಞಾನ ಕ್ಷೇತ್ರದ ಎರಡು ವೆಬ್ ಪೋರ್ಟಲ್ ಗಳನ್ನು ಶೀಘ್ರವೇ ತೆರೆಯಲಾಗುವುದು ಎಂದು ಜಾವ್ಡೇಕರ್ ತಿಳಿಸಿದ್ದಾರೆ,ಈ ಪ್ರಾಜೆಕ್ಟ್ ಗಳಿಗೆ ನಿಷ್ಪಕ್ಷಪಾತವಾಗಿ ಅನುದಾನ ನೀಡಿ ಯೋಜನೆ ಗಳನ್ನು ಅನುಷ್ಠಾನಗೊಳಿಸುವುದು ಸವಾಲಿನ ಕೆಲಸವಾಗಿದೆ ಎಂದು ತಿಳಿಸಿದ್ದಾರೆ. IMPRESS (ಸಮಾಜವಿಜ್ಞಾನದ ಪರಿಣಾಮಕಾರಿ ಸಂಶೋಧನಾ ನೀತಿ)  ಮೂಲಕ ಎಲ್ಲಾ ರಾಜ್ಯಗಳಿಗೆ ಹಣ ನೀಡಲಾಗುವುದು. ಈ ಹಣವನ್ನು ನಗರ ರೂಪಂತರಕ್ಕೆ, ಮಾಧ್ಯಮ, ಸಂಸ್ಕೃತಿ, ಗ್ರಾಮೀಣ ರೂಪಾಂತರ.ಸರ್ಕಾರದ ಆವಿಷ್ಕಾರ, ಕೃಷಿ,ಮತ್ತು ಗ್ರಾಮೀಣಾಭಿವೃದ್ಧಿ, ಸಾಮಾಜಿಕ ಮಾಧ್ಯಮ ಮತ್ತಿತರ ಕ್ಷೇತ್ರಗಳ ಅಭಿವೃದ್ಧಿಗೆ ಗಮನ ನೀಡಲಾಗುವುದು,ಭಾರತ ಮತ್ತು ವಿದೇಶಿ ವಿವಿಗಳ ಸಹಯೋಗದಲ್ಲಿ  ಸಂಶೋಧನಾ ಸಂಸ್ಥೆ ಸಬಲಗೊಳಿಸಲು  ನಿರ್ಧರಿಸಲಾಗಿದೆ.
ಮೂರು ವರ್ಗಗಳಲ್ಲಿ ಈ ಯೋಜನೆಗೆ 418 ಕೋಟಿ ಅನುದಾನ ಹಂಚಿಕೆ ಮಾಡಲಾಗಿದೆ ಎಂದು ಕರಗಾಪರ ಐಐಟಿ ನಿರೇದಶಕ ಚಕ್ರವರ್ತಿ ಹೇಳಿದ್ದಾರೆ. ಭಾರತದ ಮೊದಲ ನೂರು ಸಂಸ್ಥೆಗಳು ಈ ಯೋಜನೆ ಪಡೆಯಲು ಅರ್ಜಿ ಸಲ್ಲಿಸಬಹುದಾಗಿದೆ, ಯೋಜನೆಗೆ ಆಯ್ಕೆ ಮಾಡಲು ರ್ಯಾಂಕಿಂಗ್ ಮಾನದಂಡವಾಗಿರುತ್ತದೆ.

About the author

ಕನ್ನಡ ಟುಡೆ

Leave a Comment