ಸುದ್ದಿ

ಸರಕಾರಿ ವ್ಯವಹಾರದಲ್ಲಿ ‘ದಲಿತ’ ಪದಕ್ಕೆ ನಿಷೇಧ

ಸರಕಾರದ ವ್ಯವಹಾರ ಹಾಗೂ ಯಾವುದೇ ಪ್ರಮಾಣ ಪತ್ರದಲ್ಲಿ ಪರಿಶಿಷ್ಟ ಜಾತಿಯವರಿಗೆ ಇನ್ಮುಂದೆ ‘ದಲಿತ’ ಎಂಬ ಪದ ಬಳಸುವಂತಿಲ್ಲ! ಸಾಂವಿಧಾನಿಕವಾಗಿ ಮನ್ನಣೆ ಪಡೆದ ‘ಪರಿಶಿಷ್ಟ ಜಾತಿ’ ಎಂದೇ ಬಳಸುವಂತೆ ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಮಂತ್ರಾಲಯ, ಎಲ್ಲ ರಾಜ್ಯಗಳಿಗೆ ಸೂಚಿಸಿದೆ.

ಈ ಹಿಂದೆ ಚಾಲ್ತಿಯಲ್ಲಿದ್ದ ‘ಹರಿಜನ’ ಪದ ಬಳಕೆಯನ್ನು 1982ರಿಂದ ನಿಷೇಧಿಸಲಾಗಿದೆ. ಈಗ ‘ಹರಿಜನ’ ಜತೆಗೆ ‘ದಲಿತ’ ಪದವೂ ಸರಕಾರದ ದಾಖಲೆಗಳಲ್ಲಿ ಇತಿಹಾಸ ಪುಟ ಸೇರಲಿದೆ. ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಮಂತ್ರಾಲಯದ ಆದೇಶದಂತೆ ದೇಶದ ಎಲ್ಲ ರಾಜ್ಯಗಳ ಇಲಾಖೆಗಳು, ‘ದಲಿತ’ ಪದದ ಬದಲು ‘ಪರಿಶಿಷ್ಟ ಜಾತಿ’ ಎಂದೇ ಕಡ್ಡಾಯವಾಗಿ ಬಳಸಬೇಕಿದೆ.

ಸರಕಾರದ ನಾನಾ ಇಲಾಖೆಗಳು ತಮ್ಮ ಪ್ರಮಾಣ ಪತ್ರ, ವ್ಯವಹಾರ ಸೇರಿ ಇತರ ಸಂದರ್ಭಗಳಲ್ಲಿ ಪರಿಶಿಷ್ಟ ಜಾತಿಯವರನ್ನು ಗುರುತಿಸಲು ‘ದಲಿತ’ ಎಂಬ ಪದ ಬಳಸುವುದು ಸಾಮಾನ್ಯವಾಗಿತ್ತು. ಇಂತಹ ಪದ ಬಳಕೆಗೆ ಕೇಂದ್ರ ಸರಕಾರ ಇತ್ತೀಚೆಗೆ ಕಡಿವಾಣ ಹಾಕಿದೆ. ಇನ್ಮುಂದೆ ದೇಶದ ಪ್ರತಿಯೊಂದು ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶದ ಯಾವುದೇ ಇಲಾಖೆಯಲ್ಲಿಯೂ ‘ದಲಿತ’ ಪದ ಬಳಸದಂತೆ ಸೂಚಿಸಿ, 2018, ಮಾ.15ರಂದು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಮಂತ್ರಾಲಯ, ಆಯಾ ರಾಜ್ಯದ ಮುಖ್ಯ ಕಾರ್ಯದರ್ಶಿಗೆ ಬರೆದ ಪತ್ರದಲ್ಲಿ ವಿವರಿಸಲಾಗಿದೆ.

About the author

ಕನ್ನಡ ಟುಡೆ

Leave a Comment