ರಾಜಕೀಯ

ಸರ್ಕಾರಿ ವಾಹನ ಬಳಸಿ ನೀತಿ ಸಂಹಿತೆ ಉಲ್ಲಂಘಿಸಿದ ಸಚಿವ ರುದ್ರಪ್ಪ ಲಮಾಣಿ.

ಹಾವೇರಿ:  ಚುನಾವಣಾ ನೀತಿ ಸಂಹಿತೆ ಜಾರಿ ಬಳಿಕವೂ ಸಚಿವ ರುದ್ರಪ್ಪ ಲಮಾಣಿ ಸರ್ಕಾರಿ ವಾಹನ ಬಳಕೆ ಮಾಡಿ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ.

ಜವಳಿ ಮತ್ತು ಮುಜರಾಯಿ ಸಚಿವರಾಗಿರುವ ಲಮಾಣಿ ಹಾವೇರಿ ನಗರದ ತಮ್ಮ‌ ನಿವಾಸದಿಂದ ಪೊಲೀಸ್ ಎಸ್ಕಾರ್ಟ್ ವಾಹನ ಬಳಸಿಕೊಂಡು ಪ್ರಯಾಣ ಬೆಳೆಸಿದರು. ಚುನಾವಣೆ ದಿನಾಂಕ ನಿಗದಿ ಕುರಿತು ಮಾಧ್ಯಮಗಳಿಗೆ ಹೇಳಿಕೆ ನೀಡಿದ ನಂತರ ಸರ್ಕಾರಿ ವಾಹನದಲ್ಲಿ ಹೊರಟರು.

ನಂತರ ನೀತಿ ಸಂಹಿತೆ ಬಗ್ಗೆ ಎಚ್ಚೆತ್ತ ಸಚಿವರು ಹಾವೇರಿ ನಗರದ ಪ್ರವಾಸಿ ಮಂದಿರದಲ್ಲಿ ಸರ್ಕಾರಿ ವಾಹನ ಬಿಟ್ಟು ಖಾಸಗಿ ವಾಹನದಲ್ಲಿ ತೆರಳಿದರು. ರಾಣೇಬೆನ್ನೂರು ತಾಲೂಕಿನ ಕವಲೆತ್ತು ಗ್ರಾಮದತ್ತ ಖಾಸಗಿ ವಾಹನದಲ್ಲಿ ತೆರಳಿದರು.

About the author

ಕನ್ನಡ ಟುಡೆ

Leave a Comment